ಮೈಸೂರು

ಮೃಗಾಲಯ ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ

ಮೈಸೂರು,ಜೂ7:- ಮೈಸೂರು ಮೃಗಾಲಯದ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಮೈಸೂರಿನ ತೆರೆಸಿಯನ್ ಅಲುಮನ್ಸ್ ಅವರು ತಲಾ 20,000 ರೂ.ಗಳನ್ನು ಪಾವತಿಸಿ ಇಂಡಿಯನ್ ಗ್ರೇ ವುಲ್ಸ್ ಹಾಗೂ ಪ್ಲೆಮಿಂಗ್‍ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಚಿತ್ರದುರ್ಗದ ಶಶಿಕಲಾ ಎಂಬುವವರು 5,000 ರೂ.ಗಳನ್ನು ಪಾವತಿಸಿ ಬಿರತೆ ಬೆಕ್ಕನ್ನು, ಮೈಸೂರಿನ
ಗಹನ್ ಡಿ ಗೌಡ ಎಂಬುವವರು 7,500 ರೂಗಳನ್ನು ಪಾವತಿಸಿ ಮಚ್ಚೆಯುಳ್ಳ ಜಿಂಕೆಯನ್ನು, ಆರ್. ಸೆಲ್ವರಾಜ್ ಅವರು 3,500 ರೂ.ಗಳನ್ನು ಪಾವತಿಸಿ ಕಾಳಿಂಗ ಸರ್ಪವನ್ನು ಹಾಗೂ ಎಂ.ಆರ್.ನಿತೇಶ್ ಅವರು 3,500 ರೂಗಳನ್ನು ಪಾವತಿಸಿ ಕಾಳಿಂಗ ಸರ್ಪವನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯದ ನಿರ್ವಹಣೆಗೆ ಕೈ ಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: