ಕರ್ನಾಟಕಪ್ರಮುಖ ಸುದ್ದಿ

ಕೆಂಪು ದೀಪ ನಿಷೇಧ: ಈಗ ತೆಗೆಯಬೇಕಾದ ಅಗತ್ಯವಿಲ್ಲ ಖಾರವಾಗಿಯೇ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಾರಿನ ಮೇಲಿನ ಕೆಂಪು ದೀಪ ನಿಷೇಧ ಕುರಿತಂತೆ ಕೆಂಪು ದೀಪ ತೆರವಿನ ಕುರಿತು ಪ್ರಶ್ನಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗೇ ಪ್ರತಿಕ್ರಿಯಿಸಿದ್ದಾರೆ.

ನಾನ್ ಯಾಕ್ರೀ ಈಗ ಕೆಂಪು ದೀಪ ತೆಗೆಯಬೇಕು? ಮೇ ಒಂದರಿಂದ ತಾನೇ ಜಾರಿಗೆ ಬರೋದು ಕೇಂದ್ರ ಸಚಿವ ಸಂಪುಟದ ನಿರ್ಧಾರ ಮೇ ಒಂದರಿಂದ ಅಲ್ವಾ ಜಾರಿಗೆ ಬರೋದು. ಈಗ ತೆಗೆಯಬೇಕಾದ ಅವಶ್ಯಕತೆ ಇಲ್ಲ ಎಂದು ಕೆಂಪು ದೀಪ ತೆರವು ಕುರಿತು  ಮುಖ್ಯಮಂತ್ರಿ  ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸೋಮವಾರವೂ ಬೆಂಗಳೂರಿನ  ಸ್ವಾತಂತ್ರ್ಯ ಉದ್ಯಾನವನದ ಖಾದಿ ಉತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಕೆಂಪು ದೀಪ ಇಲ್ಲದ ಕಾರಿನಲ್ಲಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮಗಳು ಕೆಂಪು ದೀಪ ತೆಗೆದ ಕುರಿತು ಪ್ರಶ್ನಿಸಿದಾಗ  ಕಾರನ್ನು ನೋಡಿ ಆಶ್ಚರ್ಯಗೊಂಡು, ಯಾಕ್ರೀ ರೆಡ್ ಲೈಟ್ ತೆಗೆದಿದ್ದು  ಎಂದು ಚಾಲಕನನ್ನು ಪ್ರಶ್ನಿಸಿದ್ದರು.  ಈ ವೇಳೆ ಅವರು ಆರ್ಡರ್ ಆಗಿದೆ ಸಾರ್, ಅದಕ್ಕೆ ತೆಗೆಯಲಾಗಿದೆ ಎಂದು ಉತ್ತರಿಸಿದ್ದರು. ಇದಕ್ಕೆ ಕೋಪಗೊಂಡ  ಮುಖ್ಯಮಂತ್ರಿಗಳು, ಯಾವ ಆರ್ಡರ್? ನನ್ನ ಅನುಮತಿ ಇಲ್ಲದೇ ಕೆಂಪು ದೀಪ ತೆಗೆದಿದ್ದು ಯಾಕೆ ಎಂದು ಪ್ರಶ್ನಿಸಿದ್ದರು. ಮೇಒಂದರಿಂದ ಜಾರಿಗೆಯಾಗೋ ಆದೇಶಕ್ಕೆ ಅವಸರ ಯಾಕೆ ಎಂದಿದ್ದಾರೆ.

ಮೇ 1 ರಿಂದ ಅನ್ವಯವಾಗುವಂತೆ ರಾಷ್ಟ್ರಪತಿ, ಪ್ರಧಾನಿಯೂ ಸೇರಿದಂತೆ ಗಣ್ಯವ್ಯಕ್ತಿಗಳ ಹಾಗೂ ಸರ್ಕಾರಿ ಅಧಿಕಾರಿಗಳ ಕಾರಿನ ಮೇಲೆ ಕೆಂಪು ದೀಪ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ತುರ್ತು ಸೇವೆ ಒದಗಿಸುವ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಮಾತ್ರ ಕೆಂಪು/ನೀಲಿ ದೀಪವನ್ನು ಬಳಸಬಹುದಾಗಿದೆ.

Leave a Reply

comments

Related Articles

error: