ಪ್ರಮುಖ ಸುದ್ದಿಮನರಂಜನೆ

 ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳ ಪ್ರಸಿದ್ಧ  ಕಾಸ್ಟಿಂಗ್ ನಿರ್ದೇಶಕರಾದ ಸೆಹರ್ ಆಲಿ ಲತೀಫ್ ಹೃದಯಾಘಾತದಿಂದ ನಿಧನ

ದೇಶ(ಮುಂಬೈ)ಜೂ.8:- ಬಾಲಿವುಡ್ ಮತ್ತು ಹಾಲಿವುಡ್ ಚಲನಚಿತ್ರಗಳು ಮತ್ತು ವೆಬ್ ಶೋಗಳ  ಕಾಸ್ಟಿಂಗ್ ನಿರ್ದೇಶಕರಾದ ಸೆಹರ್ ಆಲಿ ಲತೀಫ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರ ಮೂತ್ರಪಿಂಡಗಳ ವೈಫಲ್ಯದಲ್ಲಿನ ಚಿಕಿತ್ಸೆಗಾಗಿ   ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಅಲ್ಲಿ ಅವರ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ. ‘ಮಸ್ಕಾ’ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ನಟ ಪ್ರೀತ್ ಕಮಾನಿ, ಸೆಹರ್ ಆಲಿ ಲತೀಫ್ ಅವರ ನಿಧನದ ಕುರಿತು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.   ಅವರ ನಿಧನಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಅವರನ್ನು ಅದ್ಭುತ ವ್ಯಕ್ತಿಯಾಗಿದ್ದರು ಎಂದಿದ್ದಾರೆ.

ಸೆಹರ್ ಆಲಿ ಲತೀಫ್ ‘ಲಂಚ್ ಬಾಕ್ಸ್’, ‘ಮಾನ್ಸೂನ್ ಶೂಟ್ ಔಟ್’, ‘ಶಂಕುತಲಾ ದೇವಿ’, ‘ದುರ್ಗಾಮತಿ’, ‘ಮಸ್ಕಾ’ ಚಿತ್ರಗಳೊಂದಿಗೆ ಮತ್ತು ‘ಭಾಗ್ ಬಿನಿ ಭಾಗ್’ ಎಂಬ ವೆಬ್ ಶೋಗೆ ಕಾಸ್ಟಿಂಗ್ ನಿರ್ದೇಶಕರಾಗಿ ಸಂಬಂಧ ಹೊಂದಿದ್ದರು.

ಅವರು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ‘ಮಸ್ಕಾ’ ಚಲನಚಿತ್ರವನ್ನು ಮತ್ತು ‘ಭಾಗ್ ಬಿನಿ ಭಾಗ್’ ಎಂಬ ವೆಬ್ ಶೋ ಅನ್ನು ತಮ್ಮ ಪ್ರೊಡಕ್ಷನ್ ಹೌಸ್ ‘ಮ್ಯುಟೆಂಟ್ ಫಿಲ್ಮ್ಸ್’ ಅಡಿಯಲ್ಲಿ ನಿರ್ಮಿಸಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: