ಮೈಸೂರು

ಚಾಮರಾಜನಗರ ಆಕ್ಸಿಜನ್ ದುರಂತ  ಪ್ರಕರಣ : ಆಡಿಯೋದಲ್ಲಿರೋದು ಸತ್ಯವಾಗಿದ್ದರೆ ಕೂಡಲೇ ಅಧಿಕಾರಿಯನ್ನು ಬಂಧಿಸಿ; ಮಾಜಿ ಶಾಸಕ ವಾಸು ಆಗ್ರಹ

ಮೈಸೂರು,ಜೂ.8:- ಚಾಮರಾಜನಗರ ಆಕ್ಸಿಜನ್ ದುರಂತ  ಪ್ರಕರಣ ಸಂಬಂಧ ಅಧಿಕಾರಿ ಹಾಗೂ ವ್ಯಕ್ತಿಯ ಸಂಭಾಷಣೆ ವೈರಲ್ ಆಗಿದೆ. ಈ ಆಡಿಯೋದಲ್ಲಿರೋದು ಸತ್ಯವಾಗಿದ್ದರೆ ಕೂಡಲೇ ಅಧಿಕಾರಿಯನ್ನು ಬಂಧಿಸಿ. ಆ ಐಎಎಸ್ ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲಿಸಿ ಎಂದು   ಮಾಜಿ ಶಾಸಕ ವಾಸು ಆಗ್ರಹಿಸಿದರು.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರೋಹಿಣಿ ಸಿಂಧೂರಿಯವರ ಹೆಸರೇಳದೇ ಅಧಿಕಾರಿಯನ್ನು ಬಂಧಿಸಿ ಎಂದು ಹೇಳಿದರು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇತಿಹಾಸದಲ್ಲೇ ಇದೊಂದು ದುರದೃಷ್ಟಕರ ಸಂಗತಿ. ಅಧಿಕಾರಿಯ ಅಹಂನಿಂದ ಹತ್ತಾರು ಪ್ರಾಣಗಳು ಹೋಗಿವೆ. ಈ ಪ್ರಕರಣ ಸಂಬಂಧ ವೈರಲ್ ಆಗಿರುವ ಆಡಿಯೋ ಪರಿಶೀಲಿಸಿ. ಸಂಬಂಧಪಟ್ಟವರ ಬಂಧಿಸಿ ಎಫ್ ಐಆರ್ ದಾಖಲಿಸಿ. ಆರೋಗ್ಯ ಸಚಿವರು ಈ ಬಗ್ಗೆ ಶೀಘ್ರದಲ್ಲೇ ಕಠಿಣ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.

ಸರ್ಕಾರ ಆಕ್ಸಿಜನ್ ಪ್ರಕರಣದಲ್ಲಿ ಸತ್ತವರಿಗೆ ಪರಿಹಾರ ನೀಡಬೇಕು. ಜಿಲ್ಲಾಡಳಿತ 24ಜನ ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು. ಆದರೆ ನ್ಯಾಯಾಲಯ 36ಜನ ಸಾವೀಗೀಡಾಗಿರುವ ಸಂಗತಿಯನ್ನು ಬೆಳಕಿಗೆ ತಂದಿದೆ. ಇಲ್ಲಿ ಸಾವಿನ ಸಂಖ್ಯೆಯನ್ನೂ ಮುಚ್ಚಿಟ್ಟು ವಂಚನೆ ಮಾಡಿದ್ದಾರೆ. ಸತ್ತವರಿಗೆಲ್ಲರಿಗೂ ಪರಿಹಾರ ನೀಡಬೇಕು ಅಂತ ನ್ಯಾಯಾಲಯ ತೀರ್ಮಾನ ನೀಡಿದೆ ಎಂದರು.

ಮೈಸೂರಿನಿಂದ ಹೋಗಬೇಕಾದರೇ  ಕಳಂಕ ತಂದಿದ್ದಾರೆ. ನನ್ನ ತವರು ಮನೆ ಅಂತ ಹೇಳಿದ್ದಾರೆ. ಆದರೆ ರಾಜಕಾರಣಿ ಗಳಿಗೆ ಅವಮಾನ ಮಾಡಿದ್ದಾರೆ. ಮೈಸೂರಿನಲ್ಲಿ ಎಂತಹ ರಾಜಕಾರಣಿ ಗಳು ಇದ್ದರು. ಯಶೋಧರ ದಾಸಪ್ಪ ದೇಶಕ್ಕೆ ಮಾದರಿ ಯಾದ ರಾಜಕಾರಣಿ ಆಗಿದ್ದರು. ಭೂ ಮಾಫಿಯಾದಿಂದ ಟ್ರಾನ್ಸಫರ್ ಆದೆ ಅಂತ. ಅದರಲ್ಲಿ ಮೈಸೂರಿನ ರಾಜಕಾರಣಿ ಗಳು ಅಲ್ಲ.‌ದೇಶದ ರಾಜಕಾರಣಿ ಗಳು ಲೇಔಟ್ ಮಾಡಿದ್ದಾರೆ. ಐಎಎಸ್ ಅಧಿಕಾರಿ ಅವರ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರ ನೀಡಬೇಕು. ನಿಗರ್ಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮಾಜಿ ಶಾಸಕ ವಾಸು ಟಾಂಗ್ ನೀಡಿದರು.

ಅಧಿಕಾರಿಗಳು ಯಾರು ಯಾರಿಗೆ ಸಹಾಯ ಮಾಡಿದ್ದಾರೆ. ಯಾರ್ಯಾರ ಸಂಪರ್ಕದಲ್ಲಿದ್ದಾರೆ ಅನ್ನೋದು ನಮಗೂ ಗೊತ್ತು. 8 ತಿಂಗಳಿಗೆ ತಾಯಿ ಫೀಲಿಂಗ್ಸ್ ಬಂದು ಬಿಡುತ್ತಾ..? ರೋಹಿಣಿ ಸಿಂಧೂರಿ ತನ್ನ ಸ್ವಾರ್ಥಕ್ಕಾಗಿ ಮೈಸೂರನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ಮೈಸೂರಿಗರ ಕ್ಷಮೆಯಾಚಿಸಬೇಕು. ಸರ್ಕಾರ ಸಿಂಧೂರಿಗೆ ಕಡ್ಡಾಯ ರಜೆ ಕೊಟ್ಟು ಕಳುಹಿಸಬೇಕು. ಮೈಸೂರಿನ ಎಲ್ಲ ರಾಜಕಾರಣಿಗಳನ್ನು ಅವಮಾನಿಸಿದ್ದಾರೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: