ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಕಾವೇರಿ ಕಾನೂನು ಹೋರಾಟ: ಆದೇಶ ಮಾರ್ಪಾಡು ಕೋರಿ ಕರ್ನಾಟಕದಿಂದ ಮತ್ತೆ ಸುಪ್ರೀಂಗೆ ಅರ್ಜಿ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಎರಡನೇ ಬಾರಿಗೂ ಕರ್ನಾಟಕದ ಹಿತಾಸಕ್ತಿಗೆ ವ್ಯತಿರಿಕ್ತವಾದ ತೀರ್ಪು ಬಂದ ಹಿನ್ನೆಲೆಯಲ್ಲಿ ಹಿಂದಿನ ಎರಡು ಆದೇಶ ಮಾರ್ಪಡಿಸುವಂತೆ ಕೋರಿ ಸುಪ್ರೀಂಗೆ ಮತ್ತೆ ಅರ್ಜಿ ಸಲ್ಲಿಸಲಾಗಿದೆ.

ಕೆಆರ್‍ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಿದೆ. ಕುಡಿಯಲಷ್ಟೇ ಈ ನೀರನ್ನು ಬಳಸಲಾಗುವುದು. ನಮ್ಮಲ್ಲಿನ ಬೆಳೆಗೆ ನೀರಿಲ್ಲ. ಇನ್ನು, ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಬಿಡಲಾಗುವುದಿಲ್ಲ ಎಂದು ರಾಜ್ಯ ಸರಕಾರ ತನ್ನ ವಾದವನ್ನು ಮಂಡಿಸಿತ್ತು. ಆದರೂ ಸುಪ್ರೀಂ ನೀರು ಬಿಡುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಮತ್ತೆ ಸುರ್ಪೀಂಗೆ ಆದೇಶ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಿದೆ.

ಕಾವೇರಿಗಾಗಿ ಮಾಜಿ ಪ್ರಧಾನಿ ಎಚ್‍.ಡಿ. ದೇವೇಗೌಡ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ನೀರಾವರಿಗಾಗಿ ದೇವೇಗೌಡರು ನಿರಂತರ ಹೋರಾಟ ನಡೆಸಿದ್ದಾರೆ. ಇದರಿಂದಲಾದರೂ ನ್ಯಾಯಾಧೀಶರ ಕಣ್ಣು ತೆರೆಯಲಿ. ನೀರು ಬಿಡಲಾಗುವುದಿಲ್ಲ ಎಂದು ಸಾಕಷ್ಟು ಬಾರಿ ಹೇಳಿದ್ದೇವೆ. ಕಾವೇರಿ ಕಾನೂನು ಹೋರಾಟದಲ್ಲಿ ರಾಜ್ಯ ಸರಕಾರಕ್ಕೆ ಸೆಪ್ಟೆಂಬರ್‍ನಲ್ಲಿ 6 ಬಾರಿ ಹಿನ್ನಡೆಯಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ ಅಚ್ಚರಿ ಮೂಡಿಸಿದೆ. ಕೇಂದ್ರ ಸರಕಾರ ನಮ್ಮ ಪರವಾಗಿಲ್ಲ. ಸರ್ವಪಕ್ಷ ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‍ ಬೆಂಗಳೂರಿನಲ್ಲಿ ಹೇಳಿದ್ದಾರೆ.

Leave a Reply

comments

Related Articles

error: