ಸುದ್ದಿ ಸಂಕ್ಷಿಪ್ತ

ಡಾ.ಸಿ.ಎಸ್.ಮೃತ್ಯುಂಜಯಪ್ಪ ಅವರಿಗೆ ತೋಟಗಾರಿಕಾ ಇಲಾಖೆಯ ಪ್ರಶಸ್ತಿ 

ಸಸಿಗಳನ್ನು ಮತ್ತು ವೃಕ್ಷಗಳನ್ನು ಸಂರಕ್ಷಿಸುವ ಮೂಲಕ ಪರಿಸರಕ್ಕೆ ಮಹತ್ತರ ಕೊಡುಗೆ ನೀಡಿರುವ ಡಾ.ಸಿ.ಎಸ್.ಮೃತ್ಯುಂಜಯಪ್ಪ ಅವರಿಗೆ ಭಾರತ ಸರ್ಕಾರದ ತೋಟಗಾರಿಕೆ ಇಲಾಖೆ ‘ಪ್ಲಾಂಟ್ ಜಿನೋಮ್ ಸೇವಿಯರ್ ಕಮ್ಯುನಿಟಿ ಪ್ರಶಸ್ತಿ’ ಯನ್ನು ನೀಡಿ ಗೌರವಿಸಿದೆ.

ಏ.19 ರಂದು ಬಿಹಾರ ರಾಜ್ಯದ ಚಂಪಾರಣ್ಯ ಜಿಲ್ಲೆಯ ಮೋತಿಹಾರ್ ಎಂಬಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಭಾರತ ಸರ್ಕಾರದ ತೋಟಗಾರಿಕೆ ಇಲಾಖೆಯ ಸಚಿವ ರಾಧಾ ಮೋಹನ್ ಸಿಂಗ್ ಅವರಿಂದ ಡಾ.ಸಿ.ಎನ್.ಮೃತ್ಯುಂಜಯಪ್ಪ ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ 1,50,000 ರೂ.ನಗದನ್ನು ಒಳಗೊಂಡಿದೆ.

Leave a Reply

comments

Related Articles

error: