ಮೈಸೂರು

ಮೈಸೂರು ನಗರ ಪೊಲೀಸರಿಂದ ವಾಹನಗಳ ವಿಶೇಷ ತಪಾಸಣೆ : 190 ವಾಹನ ವಶ

ಮೈಸೂರು,ಜೂ.8:- ಕೋವಿಡ್-19 ಹರಡುವಿಕೆಯ 2ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕೋವಿಡ್-19 ನಿರ್ಬಂಧಗಳ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದ್ದು, ಮೈಸೂರು ನಗರದಲ್ಲಿಯೂ ಸಹ ಕೋವಿಡ್-19 ಹರಡುವಿಕೆಯನ್ನು
ನಿಯಂತ್ರಣ ಮಾಡುವ ಸಂಬಂಧ ನಗರದ ಪೊಲೀಸರಿಂದ ಸರ್ಕಾರದ ಕೋವಿಡ್-19 ನಿರ್ಬಂಧಗಳ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.
ಈ ಸಂಬಂಧ ಪೊಲೀಸರು ನಗರದ ಎಲ್ಲಾ ಸ್ಥಳಗಳಲ್ಲಿಯೂ ವಾಹನ ಸವಾರರು ಅನಾವಶ್ಯಕವಾಗಿ ಓಡಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಈ ದಿನ   08/06/2021 ರಂದು ಮೈಸೂರು ನಗರ ಪೊಲೀಸರು (ಕಾ ಮತ್ತು ಸು ಹಾಗೂ ಸಂಚಾರ ವಿಭಾಗ ಸೇರಿದಂತೆ) ವಾಹನ ಸವಾರರ ವಿಶೇಷ ತಪಾಸಣೆ ಕೈಗೊಂಡಿದ್ದು, ಕೋವಿಡ್-19 ನಿರ್ಬಂಧಗಳ ಮಾರ್ಗಸೂಚಿಯನ್ನು ಉಲ್ಲಂಘಿಸಿ, ಅನಾವಶ್ಯಕವಾಗಿ ಓಡಾಡುತ್ತಿದ್ದ ಸಾರ್ವಜನಿಕರ 152 ದ್ವಿಚಕ್ರ ವಾಹನಗಳು, 26 ಕಾರುಗಳು ಹಾಗೂ 12 ಆಟೋರಿಕ್ಷಾಗಳು ಸೇರಿದಂತೆ ಒಟ್ಟು 190 ವಾಹನಗಳನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ವಶಪಡಿಸಿಕೊಂಡಿರುತ್ತಾರೆ.
ಸಾರ್ವಜನಿಕರು ಸರ್ಕಾರದ ಕೋವಿಡ್-19 ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಕೋವಿಡ್-19 ಹರಡುವಿಕೆ ನಿಯಂತ್ರಣದಲ್ಲಿ ನಗರದ ಪೊಲೀಸರಿಗೆ ಸಹಕಾರ ನೀಡಬೇಕೆಂದು ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ  ತಿಳಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: