
ಮೈಸೂರು
ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರಿಗಾಗಿ ಕೊರೋನ ಉಚಿತ ವ್ಯಾಕ್ಸಿನೇಷನ್
ಮೈಸೂರು,ಜೂ.9:- ಕೋವಿಡ್ 19 ಕೊರೋನ ನಿಯಂತ್ರಣ ಹಾಗೂ ಮುಂಜಾಗ್ರತೆ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯಂತೆ ಜಿಲ್ಲಾಡಳಿತಗಳ ಮೂಲಕ ಕೈಗಾರಿಕೆ ಮತ್ತು ಎಂ.ಎಸ್.ಎಂ.ಇ ಗಳ ಕೈಗಾರಿಕಾ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರಿಗಾಗಿ ಕೊರೋನ ಉಚಿತ ವ್ಯಾಕ್ಸಿನೇಷನ್ (ಲಸಿಕೆ) ಸೌಲಭ್ಯವನ್ನು ಕೈಗಾರಿಕಾ ಪ್ರದೇಶ, ವಸಾಹತು ಮತ್ತು ಕೈಗಾರಿಕಾ ಸ್ಥಳಗಳಲ್ಲಿ ನೀಡಲಾಗುವುದು.
ಈ ಉಚಿತ ಲಸಿಕೆ ಸೌಲಭ್ಯವನ್ನು ಪಡೆಯಲು ಮೈಸೂರು ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕೈಗಾರಿಗಳು ಮತ್ತು ಎಂ.ಎಸ್.ಎಂ.ಇ ಗಳು www.msmemysuru.com ಅಥವಾ www.mysuruindustries.in ಜಾಲಾತಾಣದ ಮೂಲಕ ಅರ್ಜಿ ಸಲ್ಲಿಸಬೇಕೆಂದು ಮೈಸೂರು ಕೈಗಾರಿಕೆಗಳ ಸಂಘ ಅಧ್ಯಕ್ಷರಾದ ವಾಸು ಮತ್ತು ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಎಂ.ಎಸ್.ಎಂ.ಇ ಹೆಲ್ಪ್ ಡೆಸ್ಕ್ 9380383313 ಕ್ಕೆ ಕರೆ ಮಾಡುವಂತೆ ಕೋರಲಾಗಿದೆ.(ಜಿ.ಕೆ,ಎಸ್.ಎಚ್)