ಮೈಸೂರು

  ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ರನ್ನು ಅಭಿನಂದಿಸಿದ ಸಮರ್ಪಣಾ ಟ್ರಸ್ಟ್  

ಮೈಸೂರು,ಜೂ.9:- ನಗರದ ಶ್ರೀ ಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಹಾಗೂ ಸಮರ್ಪಣಾ ಶೈಕ್ಷಣಿಕ ಹಾಗೂ ದಾನದತ್ತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನೂತನವಾಗಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಇಂದು ಪುಷ್ಪಗುಚ್ಛ ನೀಡಿ, ಸನ್ಮಾನಿಸಿ ಅಭಿನಂದಿಸಲಾಯಿತು. ಮೈಸೂರನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂದು ಕೋರಲಾಯಿತು.

ಈ ಸಂದರ್ಭ ಶ್ರೀ ಲಕ್ಷ್ಮಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷೆ   ಶೋಭಾರಾಣಿ, ಸ್ನೇಹಿತರಾದ   ಲಕ್ಷ್ಮಿ,   ಜ್ಯೋತಿಲಕ್ಷ್ಮಿ ಮತ್ತು ಸಮರ್ಪಣಾ ಟ್ರಸ್ಟ್‍ ನ ಗೌರವ ಖಜಾಂಚಿ ಹಾಗೂ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಹಾಗೂ ಕೊರೊನಾ ಫ್ರಂಟ್‍ ಲೈನ್ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಜಿ.ಪಿ.ಹರೀಶ್  ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: