ದೇಶಪ್ರಮುಖ ಸುದ್ದಿ

ನಕಲಿ ಪಿಎಚ್ ಡಿ ಡಿಗ್ರಿ ಪಡೆದ ಆರೋಪ: ಚಿತ್ರ ನಿರ್ಮಾಪಕಿ ಸ್ವಪ್ನ ಪಾಟ್ಕರ್ ಬಂಧನ

ಮುಂಬೈ,ಜೂ.9- ನಕಲಿ ಪಿಎಚ್‌ಡಿ ಡಿಗ್ರಿ ಸರ್ಟಿಫಿಕೇಟ್ ಪಡೆದ ಆರೋಪದ ಮೇಲೆ ಚಿತ್ರ ನಿರ್ಮಾಪಕಿ ಸ್ವಪ್ನ ಪಾಟ್ಕರ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಕ್ಲಿನಿಕಲ್ ಸೈಕಾಲಜಿಯಲ್ಲಿ ನಕಲಿ ಪಿಎಚ್‌ಡಿ ಡಿಗ್ರಿ ಸರ್ಟಿಫಿಕೇಟ್ ನೀಡಿ ಆಸ್ಪತ್ರೆಯೊಂದರಲ್ಲಿ ಕೆಲಸಗಿಟ್ಟಿಸಿದ್ದರು ಎಂಬ ಆರೋಪ ಸ್ವಪ್ನ ಪಾಟ್ಕರ್ ವಿರುದ್ಧ ಕೇಳಿಬಂದಿದೆ.

ಕಳೆದ ಮೇ 26 ರಂದು ಸ್ವಪ್ನ ಪಾಟ್ಕರ್ ವಿರುದ್ಧ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐಪಿಸಿ ಸೆಕ್ಷನ್ 419, 420, 467, 468 ಅಡಿಯಲ್ಲಿ ಸ್ವಪ್ನ ಪಾಟ್ಕರ್ ವಿರುದ್ಧ ಎಫ್‌ಐಆರ್ ಹಾಕಲಾಗಿತ್ತು.

‘ಶಿವ ಸೇನಾ’ ಸಂಸ್ಥಾಪಕ ಬಾಲ್ ಠಾಕ್ರೆ ಅವರ ಜೀವನ ಚರಿತ್ರೆ ಆಧಾರಿತ ‘ಬಾಲ್ಕಡು’ ಎಂಬ ಮರಾಠಿ ಚಿತ್ರವನ್ನು ಸ್ವಪ್ನ ಪಾಟ್ಕರ್ ನಿರ್ಮಾಣ ಮಾಡಿದ್ದರು. ಈ ಚಿತ್ರ 2015ರಲ್ಲಿ ತೆರೆಗೆ ಬಂದಿತ್ತು. ಬಳಿಕ 2016ರಿಂದ ಮುಂಬೈನ ಪಶ್ಚಿಮ ಬಾಂದ್ರಾದಲ್ಲಿನ ಆಸ್ಪತ್ರೆಯೊಂದರಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿ ಸ್ವಪ್ನ ಪಾಟ್ಕರ್ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಸ್ವಪ್ನ ಪಾಟ್ಕರ್ ವಿರುದ್ಧ ಸಮಾಜ ಸೇವಕ ಗುರ್ದೀಪ್ ಕೌರ್ ಸಿಂಗ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದದ್ದಾರೆ. ಛತ್ರಪತಿ ಶಾಹುಜಿ ಮಹಾರಾಜ್ ವಿಶ್ವವಿದ್ಯಾನಿಲಯದಿಂದ 2009ರಲ್ಲಿ ಸ್ವಪ್ನ ಪಾಟ್ಕರ್ ಪಡೆದಿರುವ ಪಿಎಚ್‌ಡಿ ಡಿಗ್ರಿ ಸರ್ಟಿಫಿಕೇಟ್ ನಕಲಿ ಎಂದು ಆರೋಪಿಸಿ ದೂರು ನೀಡಿದ್ದಾರೆ.

ನಕಲಿ ಪಿಎಚ್‌ಡಿ ಡಿಗ್ರಿ ಸರ್ಟಿಫಿಕೇಟ್ ತೋರಿಸಿ ಆಸ್ಪತ್ರೆಯಲ್ಲಿ ಕೆಲಸ ಗಿಟ್ಟಿಸಿದ್ದ ಸ್ವಪ್ನ ಪಾಟ್ಕರ್ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: