ಮೈಸೂರು

ಕಾಂಗ್ರೆಸ್ ಯುವಕರನ್ನು ಸೆಳೆಯಲು ಯತ್ನಿಸಬೇಕು : ಪ್ರೊ.ಬಿ.ಕೆ.ಚಂದ್ರಶೇಖರ್

ಯುವಕರನ್ನು ಸೆಳೆಯುವ ಯತ್ನ ಕಾಂಗ್ರೆಸ್ ನಿಂದ ನಡೆಯಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ಕೆ.ಚಂದ್ರಶೇಖರ್ ತಿಳಿಸಿದರು.

ಮೈಸೂರಿನ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮೈಸೂರು ಗ್ರಾಮಾಂತರ ಜಿಲ್ಲಾ ವೃತ್ತಿ ನಿರತ ಕಾಂಗ್ರೆಸ್ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿಗೆ 39ಲಕ್ಷ ಯುವಕರು ಮತ ಚಲಾಯಿಸಿದ್ದಾರೆ. ಯಾರೂ ಅದು ಬಿಜೆಪಿ ಪಕ್ಷ ಎಂದು ಮತ ಹಾಕಿಲ್ಲ. ಮೋದಿಯವರನ್ನು ನೋಡಿ ಮತ ಹಾಕಿದ್ದಾರೆ.  ಐಟಿಬಿಟಿಯಲ್ಲಿ ಹೆಚ್ಚು ಉದ್ಯೋಗದಲ್ಲಿರುವವವರು ಯುವಕರೇ ಆಗಿದ್ದಾರೆ ಅವರನ್ನು ಸೆಳೆಯುವ ಯತ್ನ ಮಾಡಬೇಕು ಎಂದರು.  ಮಹಿಳೆಯರಿಗೂ ಸ್ಥಾನಮಾನವನ್ನು ನೀಡಬೇಕು. ಪಕ್ಷ ಸಂಘಟನೆ ಬಹಳ ಮುಖ್ಯವಾಗಿದ್ದು ಅದರತ್ತ ಗಮನ ಹರಿಸಬೇಕು.  ಹಾಗಾದರೆ ಮಾತ್ರ ಮುಂದೆ ಎಲ್ಲಾ ಕಡೆಗಳಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ವೃತ್ತಿನಿರತ ಅಧ್ಯಕ್ಷರಾಗಿ ಬಿ.ಎನ್.ಪ್ರಶಾಂತ್ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಶಾಸಕ ವಾಸು ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: