ಸುದ್ದಿ ಸಂಕ್ಷಿಪ್ತ

ಮೈಸೂರು ವಿವಿ ಉಳಿಸಲು ಚರ್ಚೆ:ಏ.26 ರಂದು

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಕಳೆದ 5 ವರ್ಷಗಳಿಂದ ಯು.ಜಿ.ಸಿ. ಮಾನ್ಯತೆ ನವೀಕರಣ ಆಗದೇ ಸಮಸ್ಯೆಗಳಿಂದ ಕೂಡಿದ್ದು, ಕ.ರಾ.ಮು.ವಿ.ಹಗರಣಗಳು ಮತ್ತು ಮೈಸೂರು ವಿವಿಯ ಇತ್ತೀಚಿನ ಹಗರಣ, ಭ್ರಷ್ಟಾಚಾರ ಮತ್ತು ಅಕ್ರಮ ನೇಮಕಾತಿಯಾಗಿದ್ದು, ಇದರಿಂದ ಪ್ರತಿಷ್ಠಿತ ಎರಡು ವಿಶ್ವವಿದ್ಯಾನಿಲಯಗಳು ತಮ್ಮ ಹೆಸರನ್ನು ಕಳೆದುಕೊಳ್ಳಲು ಹೊರಟಿವೆ. ಈ ಬಗ್ಗೆ ಚರ್ಚಿಸಲು ಏ.26 ರಂದು ಬೆ.11 ಗಂಟೆಗೆ ಜೆ.ಎಲ್.ಬಿ. ರಸ್ತೆಯಲ್ಲಿರುವ ಹೊಯ್ಸಳ ಮಯೂರದಲ್ಲಿ ವಿವಿದ ನಿವೃತ್ತ ಶಿಕ್ಷಣ ತಜ್ಞರು, ವಿದ್ಯಾರ್ಥಿ ಮುಖಂಡರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಪಾಲ್ಗೊಂಡು ತಮ್ಮ ಸಲಹೆ ಹಾಗೂ ಹೋರಾಟದ ರೂಪರೇಷೆಗಳನ್ನು ನೀಡಬೇಕೆಂದು ಮೈಸೂರು ವಿಶ್ವವಿದ್ಯಾನಿಲಯ ಉಳಿಸಿ ಹೋರಾಟ ಸಮಿತಿ ಮನವಿ ಮಾಡಿದೆ.

Leave a Reply

comments

Related Articles

Check Also

Close
error: