ದೇಶಪ್ರಮುಖ ಸುದ್ದಿಮನರಂಜನೆ

400 ಬುಡಕಟ್ಟು ಕುಟುಂಬಗಳಿಗೆ ಸಹಾಯ ಮಾಡಿದ ನಟ ರಾಣಾ ದಗ್ಗುಬಾಟಿಯ

ಹೈದರಾಬಾದ್,ಜೂ.10-ಕೋವಿಡ್ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸುಮಾರು 400 ಬುಡಕಟ್ಟು ಕುಟುಂಬಗಳಿಗೆ ನಟ ರಾಣಾ ದಗ್ಗುಬಾಟಿಯ ಸಹಾಯ ಹಸ್ತ ಚಾಚಿದ್ದಾರೆ.

ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿರುವ ಬುಡಕಟ್ಟು ಕುಟುಂಬಗಳಿಗೆ ಕೋವಿಡ್‌ನಂತಹ ಸಾಂಕ್ರಾಮಿಕ ಸಮಯದಲ್ಲಿ ಬೇಕಾಗಿರುವ ಅವಶ್ಯಕ ಮೂಲಭೂತ ವ್ಯವಸ್ಥೆಯನ್ನು ರಾಣಾ ದಗ್ಗುಬಾಟಿ ಕಲ್ಪಿಸಿದ್ದಾರೆ. ಅಲ್ಲಿನ ಎಲ್ಲಾ ಹಳ್ಳಿಗಳಿಗೂ ದಿನಸಿ ಸಾಮಗ್ರಿಗಳು ಹಾಗೂ ಅತ್ಯವಶ್ಯಕ ಔಷಧಿಗಳನ್ನು ರಾಣಾ ದಗ್ಗುಬಾಟಿ ತಂಡ ಒದಗಿಸಿದೆ.

ರಾಣಾ ದಗ್ಗುಬಾಟಿ ಅಭಿನಯದ ‘ಅರಣ್ಯ’ ಚಿತ್ರ ಇತ್ತೀಚೆಗಷ್ಟೇ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಕಾಡಿನಲ್ಲಿ ಆನೆಗಳ ಜೊತೆಗೆ ವಾಸಿಸುವ ವ್ಯಕ್ತಿಯ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಅಭಿನಯಿಸಿದ್ದರು. ಚಿತ್ರೀಕರಣದ ವೇಳೆ ಬುಡಕಟ್ಟು ಜನರ ಕಷ್ಟವನ್ನು ಕಣ್ಣಾರೆ ಕಂಡಿದ್ದ ರಾಣಾ ದಗ್ಗುಬಾಟಿ ಇದೀಗ ಅದೇ ಜನರ ಕಷ್ಟಕ್ಕೆ ಮಿಡಿದಿದ್ದಾರೆ.

ಸದ್ಯ ತೆಲುಗಿನ ‘ವಿರಾಟ ಪರ್ವಂ’ ಮತ್ತು ಇನ್ನೂ ಹೆಸರಿಡದ ರೀಮೇಕ್ ಚಿತ್ರವೊಂದರಲ್ಲಿ ನಟ ರಾಣಾ ದಗ್ಗುಬಾಟಿ ಬಿಜಿಯಾಗಿದ್ದಾರೆ. ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದ ಬಳಿಕ ಈ ಎರಡೂ ಚಿತ್ರಗಳ ಶೂಟಿಂಗ್ ಮತ್ತೆ ಆರಂಭವಾಗಲಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: