ಮೈಸೂರು

ಕೊರೋನಾ ಸಂಕಷ್ಟ ದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಮೈಸೂರು,ಜೂ.10:- ಸರಸ್ವತಿಪುರಂನಲ್ಲಿರುವ  ಶ್ರೀ ಕೃಷ್ಣಧಾಮದಲ್ಲಿ  ತುಳು ಶಿವಳ್ಳಿ ಬ್ರಾಹ್ಮಣ ಸಂಘದ ವತಿಯಿಂದ ಕೊರೋನಾ ಸಂಕಷ್ಟ ದಲ್ಲಿರುವ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ನ್ನು ಸಂಘದ ಅಧ್ಯಕ್ಷರಾದ ರವಿಶಾಸ್ತ್ರಿ  ಹಾಗೂ ಎಲ್ಲಾ ಪದಾಧಿಕಾರಿಗಳ, ದಾನಿಗಳ ಸಹಕಾರ ದೊಂದಿಗೆ ವಿತರಿಸಲಾಯಿತು.

ಸಂಘದ ಗೌರವಾಧ್ಯಕ್ಷರಾದ ಎಂ.ಕೆ. ಪುರಾಣಿಕ್ ಕಾರ್ಯದರ್ಶಿ ಸುಪ್ರಭಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು. , ಸಂಘದ ಪದಾಧಿಕಾರಿಗಳಾದ  ಜಯರಾಂಭಟ್ , ನಾಗೇಶ್ ಪಿ. ವಿ, ಜಗದೀಶ್, ಎಂ ಆರ್ ಪುರಾಣಿಕ್, ವಾಸುದೇವರಾವ್, ವಿಠ್ಠಲ್ ಐ. ಎಂ, ಶ್ರೀಕಾಂತ್ ರಾವ್   ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: