
ಮೈಸೂರು
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಆಶ್ವಾಸನೆ ನೀಡಿದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್
ಮೈಸೂರು,ಜೂ.10:- ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದ ದಾಖಲೆಗಳನ್ನು ಪರಿಶೀಲಿಸುವುದಾಗಿ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಆಶ್ವಾಸನೆ ನೀಡಿದರು.
ಶಾಸಕ ಸಾ.ರಾ. ಮಹೇಶ್ ಧರಣಿ ಸ್ಥಳಕ್ಕೆ ಆಗಮಿಸಿದ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಶಾಸಕ ಸಾ.ರಾ. ಮಹೇಶ್ ಅವರ ಅಹವಾಲು ಆಲಿಸಿ ಈಗಾಗಲೇ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಎಲ್ಲಾ ರೆವಿನ್ಯೂ ದಾಖಲೆಗಳನ್ನು ಪರಿಶೀಲಿಸಿ ಏನಾದರು ರಾಜಕಾಲುವೆ ಒತ್ತವರಿಯಾಗಿದೆಯೇ ಎಂದು ವರದಿ ನೀಡಲು ಸೂಚಿಸಿದ್ದೇನೆ. ನಾನೂ ಕೂಡ ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಎಲ್ಲವನ್ನೂ ಸರ್ವೆ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತೇನೆ. ಇನ್ನು ಮೂರು ದಿನದಲ್ಲಿ ಸಮಿತಿಯಿಂದ ವರದಿ ಪಡೆದು ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದರು. (ಕೆ.ಎಸ್,ಎಸ್.ಎಚ್)
ಇದನ್ನೂ ಓದಿ