ಮೈಸೂರು

ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರೂ.13491.33ಲಕ್ಷ ಹಂಚಿಕೆ : ನಯೀಮಾ ಸುಲ್ತಾನಾ

2016-17ನೇ ಸಾಲಿಗೆ 131.1.42 ಲಕ್ಷಗಳಲ್ಲಿ ಪ್ರಾತಮಿಕ ಶಿಕ್ಷಣದ ಸಾರ್ವತ್ರೀಕರಣದ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಅನೇಕ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, 2017-18ನೇ ಸಾಲಿನಲ್ಲಿ ಸದರಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರೂ.13491.33ಲಕ್ಷಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನಾ ತಿಳಿಸಿದರು.

ಮೈಸೂರು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಆಯವ್ಯಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು, ಮಕ್ಕಳ ಹಾಜರಾತಿ ವೃದ್ಧಿಸಲು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಯತ್ತ ಕರೆತರಲು ಸರ್ಕಾರದ ಮಹತ್ವದ ಯೋಜನೆಯಾದ ಮಧ್ಯಾಹ್ನದ ಉಪಹಾರ ಯೋಜನೆಯಡಿ 2016-17ನೇ ಸಾಲಿನಲ್ಲಿ ರೂ.7140.36 ಲಕ್ಷಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 263092 –ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಸೌಕರ್ಯವನ್ನು ಒದಗಿಸಲಾಗಿದೆ. 2017-18ನೇ ಸಾಲಿಗೆ ರೂ.7269.93ಲಕ್ಷಗಳನ್ನು ಒದಗಿಸಲಾಗಿದೆ ಎಂದರು.

2017-18ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬಯಲು ಪ್ರದರ್ಶನ ಮಂದಿರ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ ರೂ.21.00ಲಕ್ಷಗಳ ಅನುದಾನ ನಿಗದಿಪಡಿಸಲಾಗಿದೆ. ಈ ಅನುದಾನದಲ್ಲಿ ಜಿಲ್ಲೆಯ ಆಯ್ದ ಪ್ರೌಢಶಾಲೆ/ ಪ್ರಾಥಮಿಕ ಶಾಲೆಗಳಲ್ಲಿ ಬಯಲು ಪ್ರದರ್ಶನ ಮಂದಿರ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. 2017-18ನೇ ಸಾಲಿನಲ್ಲಿ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಶುಚಿಯಾದ ತಾಜಾ ಮೀನು ಮಾರಾಟ ಮಾಡಲು ವೃತ್ತಿಪರ ಮೀನುಗಾರರು , ನಿರುದ್ಯೋಗಿ ಯುವಕರಿಗೆ ದ್ವಿಚಕ್ರವಾಹನ ಖರೀದಿಸಲು ಘಟಕವೆಚ್ಚ ರೂ.40ಲಕ್ಷಕ್ಕೆ ಶೇ.25ರಷ್ಟು ಗರಿಷ್ಟ ರೂ.10ಲಕ್ಷ ನೀಡಲಾಗುವುದು. ಮೂರು ಅಥವಾ ನಾಲ್ಕು ಫಲಾನುಭವಿಗಳ ಗುಂಪಿಗೆ ಒಂದು ತ್ರಿಚಕ್ರವಾಹನ ಖರಿದಿಸಲು ಘಟಕ ವೆಚ್ಚದ ಶೇ.25ರಷ್ಟು ರೂ.30ಲಕ್ಷ ಸಹಾಯಧನ ನೀಡಲು ರೂ.30 ಲಕ್ಷಗಳ ಅನುದಾನವನ್ನು ನಿಗದಿಪಡಿಸಲಾಗಿದೆ ಎಂದರು.

2017-18ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಒಟ್ಟು 44,762 ಕುಟುಂಬಗಳು ಪರಿಶಿಷ್ಟ ಪಂಗಡದ ಒಟ್ಟು 32,174 ಕುಟುಂಬಗಳು ಹಾಗೂ ಇತರೇ ಬಿಪಿಎಲ್ ಕುಟುಂಬದ ಒಟ್ಟು 85, 465 ಕುಟುಂಬಗಳು ಸೇರಿ 1,64,866 ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಮಾಡುವ ಗುರಿಯೊಂದಿಗೆ ರೂ.21,796.19 ಲಕ್ಷಗಳ ವಾರ್ಷಿಕ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಉಪಾಧ್ಯಕ್ಷ ಕಯ್ಯಂಬಳ್ಳಿ ನಟರಾಜ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: