ಕರ್ನಾಟಕಪ್ರಮುಖ ಸುದ್ದಿಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ದಾನೀಶ್ ಸೇಠ್

ಬೆಂಗಳೂರು,ಜೂ.10-`ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್‌’ ಸಿನಿಮಾ ಖ್ಯಾತಿಯ ನಟ, ನಿರೂಪಕ, ಸ್ಯಾಂಡಪ್ ಕಾಮಿಡಿಯನ್ ದಾನೀಶ್ ಸೇಠ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ದಾನೀಶ್ ಸೇಠ್ ತಮ್ಮ ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಅವರೊಂದಿಗೆ ರೆಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ಮದುವೆಯಾಗುತ್ತಿರುವ ವಿಚಾರವನ್ನು ಅವರು ಹೇಳಿಕೊಂಡಿದ್ದರು.

ನಿನ್ನೆ ರೆಜಿಸ್ಟರ್ ಮ್ಯಾರೇಜ್ ಮಾಡಿಕೊಂಡೆವು. ಅನ್ಯಾ ಹಾಗೂ ನಾನು ಇಂದು ನಮ್ಮ ಕುಟುಂಬದ, ಸ್ನೇಹಿತರ ಸಮ್ಮುಖದಲ್ಲಿ 15 ಜನರ ಮುಂದೆ ಉಂಗುರ ಬದಲಾಯಿಸಿಕೊಂಡೆವು. ಈ ಪಯಣ ಪ್ರೀತಿಯಿಂದ ಕೂಡಿರಲಿ ಎಂದು ಬಯಸುತ್ತ, ನಮ್ಮಿಬ್ಬರಿಗೂ ಹಾರೈಸಿ ಎಂದು ಮದುವೆಯ ಫೋಟೋಗಳನ್ನು ದಾನೀಶ್ ಸೇಠ್ ಅವರು ಹಂಚಿಕೊಂಡಿದ್ದಾರೆ.

ದಾನೀಶ್ ಸೇಠ್ ಅವರಿಗೆ ನಟಿ ಅನುಷ್ಕಾ ಶರ್ಮಾ, ರಾಶಿ ಖನ್ನಾ, ಕೃಷಿ ತಾಪಂಡ, ಅರ್ಚನಾ ಪನಿಯಾ ಶರ್ಮಾ, ರುಷ್ಕರ್ ಧಿಲ್ಲೋನ್, ದಿಶಾ ಮದನ್ ಮುಂತಾದವರು ಶುಭಾಶಯ ತಿಳಿಸಿದ್ದಾರೆ. ಒಟ್ಟಾರೆಯಾಗಿ ಸಿನಿಮಾ, ಕ್ರಿಕೆಟ್ ಸಂಬಂಧಿತ ಜನರು ದಾನೀಶ್‌ ಮದುವೆಗೆ ಹಾರೈಸಿದ್ದಾರೆ.

ದಾನೀಶ್ ಸೇಠ್ ಈ ಹಿಂದೆಯೇ ಟ್ವೀಟ್ ಮಾಡಿ, ಅವಳು ಯೆಸ್ ಎಂದಳು. ನನ್ನ ಜೊತೆಗೆ ಇಡೀ ಜೀವನ ಕಳೆಯುವ ನಿರ್ಧಾರಕ್ಕೆ ಬಂದಿದ್ದಕ್ಕೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದರು. ಅನ್ಯಾ ರಂಗಸ್ವಾಮಿ ಅವರು ಮುಂಬೈ ಮೂಲದವರು, ಗ್ರಾಫಿಕ್ ಡಿಸೈನರ್ ಎಂದು ಹೇಳಲಾಗಿದೆ.

ದಾನೀಶ್ ಸೇಠ್ ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್‌, ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯಭರಿತ ವಿಡಿಯೋ ಮಾಡಿ ದಾನೀಶ್ ಅಪ್‌ಲೋಡ್ ಮಾಡುತ್ತಿರುತ್ತಾರೆ. ಆ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. (ಎಂ.ಎನ್)

Leave a Reply

comments

Related Articles

error: