ಮೈಸೂರು

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ- ಶಾಸಕ ಸಾ.ರಾ.ಮಹೇಶ್ ಆರೋಪ, ಪ್ರತ್ಯಾರೋಪಗಳ ಸತ್ಯಾಂಶ ಹೊರಬರಲಿ : ಬಡಗಲಪುರ ನಾಗೇಂದ್ರ

ಮೈಸೂರು, ಜೂ.10:- ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ.ಮಹೇಶ್ ಆರೋಪ, ಪ್ರತ್ಯಾರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಿ ಸತ್ಯಾಂಶ ಸಾರ್ವಜನಿಕರಿಗೆ ತಿಳಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಗಲಪುರ ನಾಗೇಂದ್ರ ಒತ್ತಾಯಿಸಿದರು.
ಮಾಧ್ಯಮ ಹೇಳಿಕೆ ನೀಡಿರುವ ಅವರು ಭೂ ಮಾಫಿಯಾ ಕೈವಾಡ ದಿಂದಲೇ ವರ್ಗಾವಣೆ ಆಗಿದೆ ಎಂದು ಆರೋಪಿಸಿದ್ದು, ಜನಪ್ರತಿನಿಧಿಗಳು ಸರ್ಕಾರಿ ಭೂಮಿಯನ್ನು ಒತ್ತು ವರಿ ಮಾಡಿಕೊಂಡಿ ದ್ದಾರೆಂದು ಕೂ ಡ ಆರೋಪಿಸಿದ್ದಾರೆ. ಶಾಸಕ ಸಾ.ರಾ.ಮಹೇಶ್ ಸಾರಾ ಕಲ್ಯಾಣ ಮಂಟಪವನ್ನು ರಾಜಕಾಲುವೆಯ ಮೇಲೆ ನಿರ್ಮಿಸಿದ್ದಾರೆಂದು ಆರೋಪಿಸಿದ್ದಾರೆ. ಶಾಸಕ ಸಾರಾ ಮಹೇಶ್ ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಆರೋಪ ಪ್ರತ್ಯಾರೋಪದ ಸಾರಾಂಶ ಜನರಿಗೆ ತಿಳಿಯಬೇಕು. ಉಚ್ಛ ನ್ಯಾಯಾಲಯದ ನ್ಯಾಯಾಧೀಶ ರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು. ನಿವೃತ್ತ ಕಂದಾಯ ಅಧಿಕಾರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಇದ್ದು ಪಾರದರ್ಶಕ ವಾಗಿ ತನಿಖೆ ಆಗಲಿ ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: