ಮೈಸೂರು

ಕೋವಿಡ್ ಹಿನ್ನೆಲೆ : ನಾಳೆ ನಡೆಯಬೇಕಿದ್ದ ಪಾಲಿಕೆಯ ಮೇಯರ್ ಚುನಾವಣೆ ಮುಂದಕ್ಕೆ

ಮೈಸೂರು,ಜೂ.10:-  ನಾಳೆ ನಡೆಯಬೇಕಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಯನ್ನು ಹೈಕೋರ್ಟ್‌ ಆದೇಶದಂತೆ ಮುಂದೂಡಲಾಗಿದೆ.

‘ಜೂನ್‌ 11 ರಂದು ಚುನಾವಣೆ ನಡೆಸುವುದಕ್ಕೆ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ತಡೆಯಾಜ್ಞೆ ನೀಡಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಸಮಯದಲ್ಲಿ ಮೇಯರ್‌ ಚುನಾವಣೆ ನಡೆಸುವುದನ್ನು ಪ್ರಶ್ನಿಸಿ ಪಾಲಿಕೆ ಸದಸ್ಯ ಪ್ರದೀಪ್‌ ಚಂದ್ರ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: