ಮೈಸೂರು

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ಅನಾಥಾಶ್ರಮಗಳಿಗೆ ಆಹಾರ ಸಾಮಗ್ರಿ,ಔಷಧಿ ವಿತರಣೆ

ಮೈಸೂರು,ಜೂ.10:- ಕೋವಿಡ್-19 2ನೇ ಅಲೆಯ ಕಾರಣ ಸಂಕಷ್ಟದಲ್ಲಿರುವ ಅನಾಥಾಶ್ರಮಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು, ರಾಮಚಂದ್ರ ಡಿ. ಹುದ್ಧಾರ್, ಅವರ ನೇತೃತ್ವದಲ್ಲಿ ನಗರದ ಎಲ್ಲಾ ನ್ಯಾಯಾಧೀಶರುಗಳು ಸೇರಿ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವರಾಜ ಭೂತೆ ಅವರು ತಿಳಿಸಿದ್ದಾರೆ.

ಮೂರು ಆಶ್ರಮಗಳಾದ ಬನ್ನಿಮಂಟಪದ ಮದರ್ ತೆರೇಸಾ ಸೇವಾ ಕೇಂದ್ರ, ಜಯನಗರದ ಛಾಯಾದೇವಿ ಸೇವಾ ಸಂಸ್ಥೆ ಹಾಗೂ ಬಿ.ಎಂ.ಶ್ರೀ ನಗರದ ಆಶೋದಾಯಕ ಸೇವಾ ಸಂಸ್ಥೆಗಳಿಗೆ 8 ಕ್ವಿಂಟಾಲ್ ಅಕ್ಕಿ, ಔಷಧಿ ಮತ್ತು ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ಹಾಗೆಯೇ ನ್ಯಾಯಾಲಯದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಸ್ವಚ್ಛತಾ ಕಾರ್ಮಿಕರಿಗೂ ಸಹ 2 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: