ಕರ್ನಾಟಕಪ್ರಮುಖ ಸುದ್ದಿಮೈಸೂರು

ಪೆಟ್ರೋಲ್-ಡೀಸೆಲ್ ದರ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ   ಸೌಟು , ಲಟ್ಟಣಿಗೆ ಸದ್ದು ಮಾಡಿ ಪ್ರತಿಭಟನೆ

ಬೆಂಗಳೂರು/ಮೈಸೂರು,ಜೂ.11:-  ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ   ಕೆ.ಸಿ.ವೇಣುಗೋಪಾಲ್  , ಕೆಪಿಸಿಸಿ ಅಧ್ಯಕ್ಷರು  ಡಿ.ಕೆ.ಶಿವಕುಮಾರ್  ಹಾಗೂ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುಶ್ಮಿತಾ ದೇವ್ ಅವರ ಆದೇಶದ ಮೇರೆಗೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್ ಬಂಕ್ ಗಳ ಮುಂದೆ ಪ್ರತಿಭಟನೆಗೆ ತಟ್ಟೆ ಬಡಿದು ಸೌಟು , ಲಟ್ಟಣಿಗೆ ಸದ್ದು ಮಾಡಿ ಪ್ರತಿಭಟನೆ ನಡೆಸುತ್ತಿದ್ದು, ಮೈಸೂರಿನಲ್ಲಿಯೂ ಬೆಂಬಲ ವ್ಯಕ್ತವಾಗಿದೆ.

ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ತಟ್ಟೆ ಬಡಿದು ಸೌಟು ಮತ್ತು ಲಟ್ಟಣಿಗೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಎಫ್ ಬಿ ಲೈವ್ ಬಂದು ಮಾತನಾಡಿ   ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬ್ಯಾರೆಲ್ ಬೆಲೆ ಕಡಿಮೆ ಇದ್ದರೂ ಸಹ ಕೇಂದ್ರ ಸರ್ಕಾರ ಸಾರ್ವಜನಿಕರ ಮೇಲೆ ಅಧಿಕ ತೆರಿಗೆ ಹೊರಿಸಿ ಶತಕ ಬಾರಿಸಿದೆ. ಎಲ್ಲ ಪೆಟ್ರೋಲ್ ಬಂಕ್ ಗಳ ಮುಂದೆ ನಾವು ಪ್ರತಿಭಟನೆ ನಡೆಸಿದ್ದೇವೆ. ಪೆಟ್ರೋಲ್ ದರ 100ರೂ.ದಾಟಿದೆ. ಇದನ್ನು ಖಂಡಿಸಿ ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ನಾವಿವತ್ತು ಮಹಿಳಾ ಕಾಂಗ್ರೆಸ್ ವತಿಯಿಂದ ಸೌಟು ಲಟ್ಟಣಿಗೆ ಸದ್ದು ಮಾಡಿದ್ದೇವೆ. ಪೆಟ್ರೋಲ್ ಬೆಲೆ 100ರೂ.ದಾಟಿದೆ ಎಂದು ಕಿಡಿಕಾರಿದರು. ಇದೇ ವೇಳೆ  ಪೆಟ್ರೋಲ್ ದರ 100ರೂ.ದಾಟಿದರೂ ಕೂಡ ವ್ಯಕ್ತಿಯೋರ್ವರು ತಮ್ಮ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡಿದ್ದಕ್ಕೆ ಅವರಿಗೆ ಗುಲಾಬಿ ಹೂ ನೀಡಿ ಪೆಟ್ರೋಲ್ ದರ ನೂರು ರೂ.ದಾಟಿದರೂ ಕೂಡ ನೀವು ಪೆಟ್ರೋಲ್ ಹಾಕಿಸಿಕೊಂಡಿದ್ದೀರಿ, ನಿಮಗೆ ಒಳ್ಳೆಯದಾಗಲಿ, ಆದರೆ ಬಡವರ ಪರ ಧ್ವನಿ ಎತ್ತಬೇಕು ಎಂದರೆ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಆಗಬೇಕಲ್ವಾ? ಎಂದು ಪ್ರಶ್ನಿಸಿದರು.  ಅನ್ಯಾಯವನ್ನು ಖಂಡಿಸಿ ತೆರಿಗೆ ವಿಧಿಸಿದ್ದು, ಪೆಟ್ರೋಲ್ ಬೆಲೆ ಏರಿಸಿದ್ದು ಬಿಜೆಪಿಯ ಸಾಧನೆ. ಜನರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದೇವೆ ಎಂದರು.

ಮೈಸೂರಿನಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: