ಮೈಸೂರು

ಅಮೃತ ವಿಶ್ವವಿದ್ಯಾಪೀಠಂ ಆಯೋಜಿಸಿರುವ ಬೋಧನಾ ವೃತ್ತಿಪರರ ಸಬಲೀಕರಣದ ಕುರಿತು 6 ದಿನಗಳ ರಾಷ್ಟ್ರೀಯ  ಆನ್‍ ಲೈನ್‍  ಎಫ್ ಡಿಪಿ

ಮೈಸೂರು,ಜೂ.11:-  ಬೋಧಕ ವರ್ಗವು ಇತ್ತೀಚಿನ ದಿನಗಳಲ್ಲಿ ಕ್ಷಿಪ್ರವಾಗಿ ಬದಲಾಗುತ್ತಿರುವ ಪರಿಸ್ಥಿತಿಯಿಂದಾಗಿ ಹೊಸ ವಿಧಾನಗಳನ್ನು ಬೋಧನಾ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯಿಂದ ಉಂಟಾಗುವ ಒತ್ತಡವನ್ನು ಎದುರಿಸುತ್ತಿದೆ.

ಈ ಹಿನ್ನಲೆಯಲ್ಲಿ ಮೈಸೂರಿನ ಅಮೃತ ವಿಶ್ವವಿದ್ಯಾಪೀಠಂನ ಆಂತರಿಕ ಗುಣಮಟ್ಟ ನಿರ್ವಹಣಾಕೇಂದ್ರ (ಐಕ್ಯೂಎಸಿ) ಹಾಗೂ ಭಾಷಾ ವಿಭಾಗವು ಜಂಟಿಯಾಗಿ“ಮನಃ ಪ್ರಬೋಧನಂ” ಎಂಬ ಬೋಧನಾ ವೃತ್ತಿಪರರ ಸಬಲೀಕರಣ ಕುರಿತಾದ 6 ದಿನಗಳ ರಾಷ್ಟ್ರೀಯ ಆನ್‍ಲೈನ್‍ ಅಧ್ಯಾಪಕ ಅಭಿವೃದ್ದಿ ಕಾರ್ಯಕ್ರಮವನ್ನು (ಎಫ್ ಡಿಪಿ) ಜೂನ್14ರಿಂದ 19ರವರೆಗೆ ಆಯೋಜಿಸಿದೆ.

ಅಮೃತ ಪುರಿಯ ಅಮೃತ ಸ್ಕೂಲ್‍ ಆಫ್‍ ಆರ್ಯುವೇದದ ವೈದ್ಯಕೀಯ ನಿರ್ದೇಶಕ ಹಾಗೂ ಪ್ರಾಚಾರ್ಯರಾಗಿರುವ ಸ್ವಾಮಿ ಶಂಕರಾಮೃತಾನಂದ ಪುರಿಯವರು ಜೂನ್ 14ರಂದು ಸಂಜೆ 4ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.  6 ದಿನಗಳ ಕಾರ್ಯಕ್ರಮದಲ್ಲ್ಲಿ ಚಂಚಲ ಮನಸ್ಸನ್ನು ವೈದಿಕ ಪರಂಪರೆಯ ಸಹಾಯದಿಂದ ಹೇಗೆ ನಿಗ್ರಹಿಸುವುದು; ಆರೋಗ್ಯಕ್ಕೊಂದು ಯೋಗಿಕ ನಿಯಮದ ಕೈಪಿಡಿ; ಪುರಾತನ ಸಾಹಿತ್ಯದ ಮೂಲಕ ಮನಸ್ಸನ್ನು ನಿಭಾಯಿಸುವ ಹಾಗೂ ನಿರ್ದೇಶಿಸುವ ರೀತಿ; ಪ್ರಾಣಾಯಾಮದಿಂದ ಆತ್ಮಸ್ಥೈರ್ಯ ಹಾಗೂ ವಿಶ್ವಾಸದ ವರ್ಧನೆ; ಉತ್ತಮ ಆರೋಗ್ಯಕ್ಕಾಗಿ ಉತ್ತಮ ಉಸಿರಾಟ; ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪ್ರಮುಖ ಪಾತ್ರ ಹಾಗೂ ಇನ್ನಿತರ ವಿಷಯಗಳ ಕುರಿತು ನುರಿತ ವಿದ್ವಾಂಸರುಗಳ ವಿಶೇಷ ಉಪನ್ಯಾಸವನ್ನು ಕೇಳುವ ಹಾಗೂ ಸಂವಾದ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಇಂದಿನ ಒತ್ತಡದ ದಿನಗಳಲ್ಲಿ ಬೋಧಕವರ್ಗವನ್ನು ಪುರಾತನ ವಿಧಾನಗಳ ಮೂಲಕ ಬಲಪಡಿಸುವುದು ಮತ್ತು ಆಂತರಿಕವಾಗಿ ಶಕ್ತಿವರ್ಧಿಸುವ ಪರಂಪರಾನುಗತ ವಿಧಾನವನ್ನು ತಿಳಿಸಿ ಕೊಡುವುದೇ ಈ ಎಫ್ ಡಿಪಿಯ ಪ್ರಮುಖ ಗುರಿಯಾಗಿದೆ.

ಈ ಎಫ್ ಡಿಪಿ ಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಕರಿಂದ ಹಿಡಿದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರವರೆಗೆ ಯಾರು ಬೇಕಾದರೂ ಭಾಗವಹಿಸಬಹುದು. ಮಿಗಿಲಾಗಿ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿದ್ದು,ಆನ್‍ಲೈನ್ ಮೂಲಕ ನೋಂದಾಯಿಸಿಕೊಂಡು ಭಾಗವಹಿಸಿದವರಿಗೆ ಇ-ಪ್ರಮಾಣ ಪತ್ರವನ್ನು ನೀಡಲಾಗುವುದು. ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗೆ ಸಂಯೋಜಕರಾದ ಡಾ. ವಿಘ್ನೇಶ್ವರ ಭಟ್ (9449677863)ಅಥವಾ ಸಹ-ಸಂಯೋಜಕರಾದ ಡಾ.ಶ್ರೀಕಾಂತ ಪರಿಡ (8438260205)ಅವರನ್ನು ಸಂಪರ್ಕಿಸಬಹುದಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: