ಮೈಸೂರು

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ,ಎಂಎಸ್ ಪಿ ಗೆ ಶಾಸನಬದ್ಧ ರೂಪ ಕೊಡಲು ಒತ್ತಾಯಿಸಿ ಮುಂದಿನ ವಾರ ರಾಜ್ಯಾದ್ಯಂತ ಪ್ರತಿಭಟನೆ : ಬಡಗಲಪುರ ನಾಗೇಂದ್ರ

ಮೈಸೂರು,ಜೂ.11:- ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಎಂಎಸ್ ಪಿ ಗೆ ಶಾಸನಬದ್ಧ ರೂಪ ಕೊಡಲು ಒತ್ತಾಯಿಸಿ ಜೂನ್ ಮೂರನೇ ವಾರ ಅಂದರೆ ಮುಂದಿನ ವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಎದುರು ಮತ್ತು ತಾಲೂಕು ಕಛೇರಿ ಎದುರು ರೈತಸಂಘದಿಂದ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಜಲದರ್ಶಿನಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಹೇಳುವುದೇ ಸುಳ್ಳು, ಅದರಲ್ಲೇ ಕೃಷಿ ಮಂತ್ರಿ ತೋಮರ್   ಸುಳ್ಳಿನ ಸರದಾರ ಎಂದು ವಾಗ್ದಾಳಿ ನಡೆಸಿದರು.

14  ಕೃಷಿ ಉತ್ಪನ್ನಗಳಿಗೆ ಹೀಗೀಗೆ ರೇಟು ಕೊಡಬೇಕು ಅಂತ ಕ್ಯಾಬಿನೆಟ್ ನಲ್ಲಿ ಪಾಸಾಗಿದೆ. ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ ಎನ್ನುತ್ತಾರೆ. ಕೃಷಿ ಸಚಿವ ತೋಮರ್ ರೈತರು ಕೃಷಿ ಉತ್ಪನ್ನಗಳನ್ನು ಹೇಗೆ ಖರ್ಚು ಮಾಡುತ್ತಾರೆ ಅದರ ಮೇಲೆ 50ರಿಂದ 82ಪರ್ಸೆಂಟ್ ಲಾಭ ಎಂದಿದ್ದು,   ಮತ್ತೆ ಸುಳ್ಳಿನ ಪ್ರತಿಪಾದನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಭತ್ತಕ್ಕೆ 1868 ಇತ್ತು, ಈ ಸಲ 1940 ಅಂದರೆ  72ರೂ.ಜಾಸ್ತಿ ಆಗಿದೆ. ಜೋಳಕ್ಕೆ 118 ಜಾಸ್ತಿ ಆಗಿದೆ. ತೊಗರಿ ಉದ್ದಿಗೆ 300ರೂ.ಜಾಸ್ತಿ ಆಗಿದೆ. ಈ ವರ್ಷಕ್ಕೂ  ಕಳೆದ ವರ್ಷಕ್ಕೂ   4ಪರ್ಸೆಂಟ್ ಜಾಸ್ತಿ ಆಗಿದೆ. ರೈತರ ಪರವಾಗಿಯೇ ಕೊಡುತ್ತಿದ್ದೇವೆ. ರೈತರು ಯಾಕೆ ಹೋರಾಟ ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದಾರೆ. ಎಂಎಸ್ ಪಿ ಗೆ ಶಾಸನಬದ್ಧ ರೂಪ ಕೊಡಿ ಎಂದು ನಾವು ಕೇಳುತ್ತಿರೋದು.  ರೈತರ ಬೆಳೆಗಳನ್ನು ಖರೀದಿ ಕೇಂದ್ರಗಳು ತೆಗೆದುಕೊಳ್ಳುತ್ತಾರೆ. 100ಕ್ಕೆ 100 ಉತ್ಪನ್ನಗಳನ್ನು ತೆಗೆದುಕೊಳ್ಳಲ್ಲ. ರೈತರ 17ಪರ್ಸೆಂಟ್ ಉತ್ಪನ್ನ ಮಾತ್ರ ತೆಗೆದುಕೊಳ್ಳುತ್ತಾರೆ. ಗೊಬ್ಬರದ ಬೆಲೆ  ಜಾಸ್ತಿ, ಬಿತ್ತನೆ ಬೀಜದ ಬೆಲೆ   ಜಾಸ್ತಿ, ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿಯಾಗಿದೆ. ಕೃಷಿ ಉತ್ಪನ್ನ ವೆಚ್ಚ 40ಪರ್ಸೆಂಟ್ ಜಾಸ್ತಿ ಆಗುತ್ತಿದೆ. ಅವರು ಏರಿಸಿರುವುದು 4ಪರ್ಸೆಂಟ್. ಇದನ್ನು ಬೆಂಬಲ ಬೆಲೆ ಅಂತ ಹೇಳಕಾಗಲ್ಲ. ವಿದ್ಯುತ್ ದರ ಜಾಸ್ತಿ ಆಗಿದೆ. ಬರೆಯ ಮೇಲೆ ಬರೆ ಬೀಳುತ್ತಿದೆ. ಮುಂದಿನ ವಾರದಲ್ಲಿ ತಾಲೂಕು ಜಿಲ್ಲಾಧಿಕಾರಿಗಳು ಕೇಂದ್ರಗಳಲ್ಲಿ ಪೆಟ್ರೋಲ್ ಡೀಸೆಲ್ ದರ ವಿರೋಧಿಸಿ ಹೋರಾಟ ಮಾಡುತ್ತೇವೆ. ಲಾಕ್ ಡೌನ್ ಕೊರೋನಾ ಸಂಕಷ್ಟದಲ್ಲಿ ರೈತರಿಗೆ ಎಷ್ಟು ಸಂಕಷ್ಟವಾಗುತ್ತಿದೆ ಎಂದು ಯಾರೂ ಹೇಳುತ್ತಿಲ್ಲ ಒಂದು  ಲಕ್ಷ ಕೋಟಿಗಿಂತ ಹೆಚ್ಚು ನಷ್ಟವಾಗಿದೆ. ಸಮಿತಿಯನ್ನಾದರೂ ಮಾಡಿ ಎಂದು ಒತ್ತಾಯಿಸಿದರು.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾರಾ ಮಹೇಶ್ ನಡುವೆ ಆರೋಪ ಪ್ರತಿ ಆರೋಪ ನಡೆಯುತ್ತಿದೆ. ರೋಹಿಣಿ ಅವರು ನನ್ನ ವರ್ಗಾವಣೆಗೆ ಭೂ ಮಾಫಿಯಾ ಕಾರಣ ಎಂದು ಗಂಭೀರ ಆರೋಪ ಮಾಡುತ್ತಾರೆ. ಸಾರಾ ಮಹೇಶ್ ರವರು ರಾಜ ಕಾಲುವೆ ಮೇಲೆ‌ ನಿರ್ಮಾಣ‌ ಮಾಡಿದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದುವುದಾಗಿ ಸವಾಲು ಹಾಕುತ್ತಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಈ ಬಗ್ಗೆ ಮುಖ್ಯಮಂತ್ರಿ ರವರಿಗೆ ಪತ್ರ ಬರೆಯುತ್ತೇವೆ. ಸಿಎಂ ರವರು ಈ ಬಗ್ಗೆ ಹಾಲಿ‌ ಹೈಕೋರ್ಟ್ ಜಸ್ಟೀಸ್ ಹಾಗೂ ಸಿವಿಲ್ ಸೊಸೈಟಿ ಪ್ರತಿನಿಧಿಗಳು ಬಿಡಬೇಕು. ಸತ್ಯ ಇಡೀ ಮೈಸೂರು ಜನತೆಗೆ ತಿಳಿಯಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರವು ಆಡಳಿತ ಯಂತ್ರದ ಮೇಲೆ‌ ನಿಯಂತ್ರಣ ಹೊಂದಿದ್ದರೆ ಈ ರೀತಿ ಘಟನೆ ಆಗುವುದಿಲ್ಲ.ವಐಎಎಸ್ ಹುದ್ದೆಯನ್ನು ರದ್ದು ಮಾಡಬೇಕು. ಈ ಬಗ್ಗೆ ಗಾಂಧಿ ಹಾಗೂ ವಲ್ಲಭಭಾಯಿ ಪಟೇಲ್ ರವರು ಸಹ ಆಕ್ಷೇಪ ವ್ಯಕ್ತಪಡಿಸಿದ್ದರು.ವಐಎಎಸ್ ಅನ್ನುವುದು ಬ್ರಿಟಿಷ್ ಸಂಸ್ಕೃತಿಯ ಬಿಳಿ ಆನೆಗಳಿದ್ದಂತೆ. ನಮ್ಮ ಭಾರತಕ್ಕೆ ಐಎಎಸ್ ಅವಶ್ಯಕತೆ ಇಲ್ಲ. ನಾನು ಐಎಎಸ್ ಬಗ್ಗೆ ಟೀಕೆ ಮಾಡುತ್ತಿಲ್ಲ. ಐಎಎಸ್ ಅಧಿಕಾರಿಗಳು ಡಾಕ್ಯುಮೆಂಟ್ ಮಾಡಬೇಕು ಆಗ ಮಾತ್ರವೇ ತನಿಖೆ‌ ಮುಂದಿನ ಹಂತದಲ್ಲಿ ನಡೆಯಲು ಸಾಧ್ಯ. ಮೈಸೂರಿನ ಈ ಹಿಂದಿನ ಐಎಎಸ್  ಅಧಿಕಾರಿಗಳು ಅಪ್ರಭುದ್ದವಾಗಿ ವರ್ತಿಸಿದ್ದಾರೆ ಎಂದರು.

ಎನ್ ಟಿಎಂಎಸ್ ಶಾಲೆ ಉಳಿಸಲೇ ಬೇಕು. ಮಹಾರಾಣಿ ಅವರು ಬಾಲಕಿಯರಿಗಾಗಿ ಈ ಶಾಲೆ ಸ್ಥಾಪಿಸಿದ್ದರು. ವಿವೇಕಾನಂದ ಅವರು ಈ ಶಾಲೆಗೆ ಬಂದಿದ್ದರು ಅನ್ನುವ ಕಾರಣಕ್ಕಾಗಿ ಇಲ್ಲಿ ಸ್ಮಾರಕ ನಿರ್ಮಾಣ ಮಾಡಲು‌ ಹೊರಟಿದೆ. 2013 ರಲ್ಲಿ ಸ್ಮಾರಕ ನಿರ್ಮಾಣ ಮಾಡಲು ಆದೇಶ ಮಾಡಿದ್ದಾರೆ. ನಂತರದಲ್ಲಿ ಶಿಕ್ಷಣ ಕಮೀಷನರ್ ಅವರು ಈ ಸ್ಥಳದಲ್ಲಿ ಶಾಲೆ ಮುಂದುವರೆಯುವಂತೆ ಆದೇಶ ಮಾಡುತ್ತಾರೆ. ಹೀಗೆ ಶಾಲೆ ಬಗ್ಗೆ ಅನೇಯ ಆದೇಶಗಳು ಬಂದಿರುತ್ತದೆ. ಜಿಲ್ಲಾಡಳಿತ ಶಾಲೆಯ ಜಾಗ ಹಾಗೆ ಇರಲಿ, ಉಳಿದ ಸ್ಥಳದಲ್ಲಿ ಸ್ಮಾರಕ ಮಾಡಲಿ ಎಂದು ಆದೇಶ ಮಾಡಿದೆ. ಈ ಬಗ್ಗೆ ರೈತ ಸಂಘದ ಯಾವುದೇ ತಕರಾರು ಇಲ್ಲ. ರಾಮಕೃಷ್ಣ ಆಶ್ರಮ ದವರು ಈ ಬಗ್ಗೆ ಕೋರ್ಟ್ ಗೆ ಹೋಗಿರುವುದು ಸರಿ ಅಲ್ಲ ಎಂದರು.

 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ   ಹೊಸಕೋಟೆ ಬಸವರಾಜ್, ತಾಲ್ಲೂಕು ಅಧ್ಯಕ್ಷರಾದ   ಮರಂಕಯ್ಯ  , ತಾಲೂಕು ಕಾರ್ಯದರ್ಶಿ   ಮಂಡಕಳ್ಳಿ‌ ಮಹೇಶ್, ದಸಂಸ ಕಲ್ಲಳ್ಳಿ ಕುಮಾರ್  ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: