ಪ್ರಮುಖ ಸುದ್ದಿಮನರಂಜನೆ

 ಚಾಲೆಂಜಿಂಗ್ ಸ್ಟಾರ್  ಕರೆಗೆ ಓಗೊಟ್ಟ ರಿಯಲ್ ಸ್ಟಾರ್

ರಾಜ್ಯ(ಬೆಂಗಳೂರು)ಜೂ.11:-  ಚಾಲೆಂಜಿಂಗ್ ಸ್ಟಾರ್   ದರ್ಶನ್ ನೀಡಿದ್ದ ಪ್ರಾಣಿ ದತ್ತು ಅಭಿಯಾನಕ್ಕೆ ಕೈಜೋಡಿಸಿ  ಕರೆಗೆ ಓಗೊಟ್ಟಿರುವ ರಿಯಲ್ ಸ್ಟಾರ್   ಉಪೇಂದ್ರ ಆಫ್ರಿಕನ್ ಆನೆ ದತ್ತು ಸ್ವೀಕರಿಸಿದ್ದಾರೆ.

ಮೈಸೂರಿನ ಜಯಚಾಮರಾಜೇಂದ್ರ ಮೃಘಾಲಯದಲ್ಲಿರುವ ಆಫ್ರಿಕನ್ ಆನೆಯೊಂದನ್ನು ದತ್ತು ಸ್ವೀಕರಿಸುವ ಮೂಲಕ ದರ್ಶನ್ ಮನವಿಗೆ ಸ್ಪಂದಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಉಪೇಂದ್ರ ಪ್ರಾಣಿಗಳೇ ಗುಣದಲಿ ಮೇಲು ಶೀರ್ಷಿಕೆ  ನೀಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರೆಯಂತೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಘಾಲಯ ದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ಅವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ. -ನಿಮ್ಮ ಉಪೇಂದ್ರ  ಎಂದು ಬರೆದುಕೊಂಡಿದ್ದಾರೆ.

ಉಪೇಂದ್ರ ಅವರ ಕಾರ್ಯವನ್ನು ಪ್ರಶಂಸಿರುವ ನಟ ದರ್ಶನ್, ‘ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆಫ್ರಿಕನ್ ಆನೆ ದತ್ತು ಪಡೆದ   ಉಪೇಂದ್ರ ಅವರಿಗೆ ಹೃದಯಪೂರ್ವಕ ಧನ್ಯವಾದಗಳು’ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: