ದೇಶಪ್ರಮುಖ ಸುದ್ದಿ

ಪ್ರಧಾನಿ ಮೋದಿ ಭೇಟಿಯಾದ ಯುಪಿ ಸಿಎಂ ಯೋಗಿ ಆದಿತ್ಯನಾಥ್

ದೇಶ(ನವದೆಹಲಿ)ಜೂ.11:- ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಪಿಎಂ ನಿವಾಸದಲ್ಲಿ ಅವರ ಮಾತುಕತೆ  ಸುಮಾರು 80 ನಿಮಿಷಗಳ ಕಾಲ ನಡೆಯಿತು.

ಈ ಸಮಯದಲ್ಲಿ ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು. ಮೋದಿಯವರನ್ನು ಭೇಟಿಯಾದ ನಂತರ ಯೋಗಿ ಕೂಡ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲು ಅವರ ನಿವಾಸವನ್ನು ತಲುಪಿದ್ದಾರೆ. ಯೋಗಿ ಮತ್ತು ನಡ್ಡಾ ನಡುವಿನ ಸಭೆಯೂ ಪ್ರಾರಂಭವಾಗಿದೆ.

ಇದೇ ವೇಳೆ, ಪ‍್ರಧಾನಿ ಮೋದಿ ಅವರ ನಂಬಿಗಸ್ಥ, ಮಾಜಿ ಐಎಎಸ್ ಅಧಿಕಾರಿ ಬಿಜೆಪಿ ಎಂಎಲ್‌ಸಿ ಎ.ಕೆ.ಶರ್ಮಾ ಅವರೂ ಪಕ್ಷದ ಮುಖಂಡರು ಮತ್ತು ಮತ್ತಿತರರನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದಾರೆ.

ಈ ಭೇಟಿಯ ಕುರಿತಂತೆ ಬಗ್ಗೆ ಬಿಜೆಪಿ ಮುಖಂಡರು ಅಥವಾ ಪಕ್ಷದ ಹಿರಿಯ ಕಾರ್ಯಕರ್ತರು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ, ಆದರೆ ಈ  ಭೇಟಿ  ಉತ್ತರ ಪ್ರದೇಶ ಸರ್ಕಾರದಲ್ಲಿ ಜಿತಿನ್ ಪ್ರಸಾದ್ ಮತ್ತು ಎ.ಕೆ.ಶರ್ಮಾ ಸೇರಿದಂತೆ ಇತರ ಕೆಲವು ನಾಯಕರನ್ನು ಸೇರಿಸುವ ಬಗ್ಗೆ ಎಂದು ಮೂಲಗಳು ಹೇಳಿಕೊಂಡಿವೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: