ದೇಶಪ್ರಮುಖ ಸುದ್ದಿ

ದೇಶದಲ್ಲಿ ಇಳಿಮುಖವಾಗುತ್ತಿದೆ ಕೊರೋನಾ ಸೋಂಕು : 91,702 ಪ್ರಕರಣ ಪತ್ತೆ

ದೇಶ(ನವದೆಹಲಿ)ಜೂ.11:- ಭಾರತದಲ್ಲಿ ಕೊರೋನಾ ಸಾಂಕ್ರಾಮಿಕದಿಂದ ಹದಗೆಟ್ಟ ಪರಿಸ್ಥಿತಿ ಈಗ ಸುಧಾರಿಸುತ್ತಿದೆ. ಸತತ ನಾಲ್ಕನೇ ದಿನವೂ ಒಂದು ಲಕ್ಷಕ್ಕಿಂತ ಕಡಿಮೆ ಕೊರೋನಾ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 91,702 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 3403 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಅದೇ ವೇಳೆ 1 ಲಕ್ಷ 34 ಸಾವಿರ 580 ಜನರು ಸಹ ಕೊರೋನಾದಿಂದ ಗುಣಮುಖರಾಗಿದ್ದಾರೆ. ಅಂದರೆ  ಕೊನೆಯ ದಿನ 46,281 ಸಕ್ರಿಯ ಪ್ರಕರಣ  ಕಡಿಮೆ ಆಗಿದೆ. ಇದಕ್ಕೂ ಮುನ್ನ ಬುಧವಾರ 94,052 ಪ್ರಕರಣಗಳು ದಾಖಲಾಗಿತ್ತು.

ಸತತ 29 ನೇ ದಿನವೂ ದೇಶದಲ್ಲಿ ಹೊಸ ಕೊರೋನಾ ವೈರಸ್ ಪ್ರಕರಣಗಳಿಗಿಂತ ಹೆಚ್ಚಿನ ಚೇತರಿಕೆ ಕಂಡುಬಂದಿದೆ. ಜೂನ್ 10 ರವರೆಗೆ ದೇಶಾದ್ಯಂತ 24 ಕೋಟಿ 60 ಲಕ್ಷ ಡೋಸ್  ಲಸಿಕೆ   ನೀಡಲಾಗಿದೆ. ಕೊನೆಯ ದಿನ 32 ಲಕ್ಷ 74 ಸಾವಿರ ಲಸಿಕೆಗಳನ್ನು ನೀಡಲಾಯಿತು. ಅದೇ ಸಮಯದಲ್ಲಿ ಇದುವರೆಗೆ 37 ಕೋಟಿ 42 ಲಕ್ಷ  ಕೊರೋನಾ ಪರೀಕ್ಷೆಗಳನ್ನು ಮಾಡಲಾಗಿದೆ. ಕೊನೆಯ ದಿನ ಸುಮಾರು 20.44 ಲಕ್ಷ ಕೊರೋನಾ ಮಾದರಿ ಪರೀಕ್ಷೆಗಳನ್ನು ಮಾಡಲಾಗಿದ್ದು,  ಸಕಾರಾತ್ಮಕತೆ ಪ್ರಮಾಣವು ಶೇಕಡಾ 4 ಕ್ಕಿಂತ ಹೆಚ್ಚಾಗಿದೆ.

ದೇಶದ ಕೊರೋನಾದ ಇತ್ತೀಚಿನ ಪರಿಸ್ಥಿತಿ ಹೀಗಿದೆ

ಒಟ್ಟು ಕೊರೋನಾ ಪ್ರಕರಣಗಳು – ಎರಡು ಕೋಟಿ 92 ಲಕ್ಷ 74 ಸಾವಿರ 823, ಒಟ್ಟು ಡಿಸ್ಚಾರ್ಜ್ – ಎರಡು ಕೋಟಿ 77 ಲಕ್ಷ 90 ಸಾವಿರ 73, ಒಟ್ಟು ಸಕ್ರಿಯ ಪ್ರಕರಣಗಳು – 11 ಲಕ್ಷ 21 ಸಾವಿರ 671, ಒಟ್ಟು ಸಾವು – 3 ಲಕ್ಷ 63 ಸಾವಿರ 79 . (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: