ಕರ್ನಾಟಕಪ್ರಮುಖ ಸುದ್ದಿ

 ಆಮ್ಲಜನಕ ಕೊರತೆ ನೀಗಿಸಲು 114 ಮೆಟ್ರಿಕ್ ಟನ್ ಆಕ್ಸಿಜನ್ ರೈಲು ಆಗಮನ

ರಾಜ್ಯ(ಬೆಂಗಳೂರು), ಜೂ.11:- ರಾಜ್ಯದಲ್ಲಿ ಎದುರಾಗಿದ್ದ ಆಮ್ಲಜನಕ ಕೊರತೆ ನೀಗಿಸುವ ಸಲುವಾಗಿ ವಿವಿಧ ರಾಜ್ಯಗಳಿಂದ ನಿರಂತರವಾಗಿ ಆಮ್ಲಜನಕ ಪೂರೈಕೆಯಾಗುತ್ತದೆ.

ಇಂದು 114 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ 31 ರೈಲು ಗುಜರಾತ್ ನಿಂದ ನಗರಕ್ಕೆ ಆಗಮಿಸಿದೆ. ಈ ಮೂಲಕ 3 ಸಾವಿರ ಮೆಟ್ರಿಕ್ ಟನ್ ಅಧಿಕ ಆಮ್ಲಜನಕ ಆಗಮಿಸಿದಂತಾಗಿದೆ. ಗುಜರಾತಿನ ಜಾಮ್ ನಗರದಿಂದ 114 ಮೆ ಟನ್ ಆಕ್ಸಿಜನ್ ಹೊತ್ತು ಬೆಂಗಳೂರಿಗೆ ಬೆಳಿಗ್ಗೆ 6.30 ಕ್ಕೆ ತಲುಪಿದೆ ಎಂದು ನೈರುತ್ಯ ರೈಲ್ವೆ ಟ್ವೀಟ್ ನಲ್ಲಿ ತಿಳಿಸಿದೆ.

ಗುಜರಾತ್ ಜಾರ್ಖಂಡ್ ಒರಿಸ್ಸಾ ಸೇರಿದಂತೆ ವಿವಿಧ ರಾಜ್ಯಗಳಿಂದ ಕಳೆದ ಒಂದು ತಿಂಗಳಿನಿಂದ ಪ್ರತಿದಿನ ನಿರಂತರವಾಗಿ ಸರಾಸರಿ 120 ಬಾಗಿನಲ್ಲಿ ಆಮ್ಲಜನಕ ನಗರಕ್ಕೆ ಆಗಮಿಸುತ್ತಿದೆ. ರಾಜ್ಯ ಸರ್ಕಾರ ಕೋವಿಡ್ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಿದ್ದು ರೈಲ್ವೆ ಸಚಿವಾಲಯ ಕೈಜೋಡಿಸುವ ಮೂಲಕ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಆಂಧ್ರಪ್ರದೇಶ ಉತ್ತರಪ್ರದೇಶ ಹರಿಯಾಣ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತದೆ. ಅದರಲ್ಲಿ ಕರ್ನಾಟಕ ,ಉತ್ತರ ಪ್ರದೇಶ ,ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಮಾಡಲಾಗುತ್ತದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: