ಮೈಸೂರು

ಬೆನಕಾ ಟೈಲ್ಸ್ ನ ಮಾಲಿಕರಿಂದ ಬ್ಲ್ಯಾಕ್ ಪ್ಯಾಂಥರ್ ದತ್ತು ಸ್ವೀಕಾರ

ಮೈಸೂರು,ಜೂ.12:-  ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ವೀಕ್ಷಕರ ಕೊರತೆಯಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಮೃಗಾಲಯಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಟ್ಟಿಗೆ ಗೂಡಿನ ಬೆನಕಾ ಟೈಲ್ಸ್ ನ ಮಾಲಿಕರಾದ ಮಹೇಶ್ ಅವರು ಬ್ಲಾಕ್ ಪ್ಯಾಂಥರ್ ಅನ್ನು 35,000 ರೂಗಳನ್ನು ಪಾವತಿಸಿ ಒಂದು ವರ್ಷದ ಅವಧಿಗೆ ದತ್ತು ಪಡೆದರು.

ಈ ಸಂದರ್ಭದಲ್ಲಿ ಮೃಗಾಲಯದ  ಕಾರ್ಯನಿರ್ವಾಹಕ ನಿರ್ದೇಶಕರಾದ   ಅಜಿತ್ ಕುಲಕರ್ಣಿ, ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್,  ಮಂಚೆಗೌಡರು ಹಾಗೂ ಮಾ.ಸಮಯ್, ಚಿನ್ಮಯ್,   ಕೃಷಿಕಾ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: