ಮೈಸೂರು

ವ್ಯಕ್ತಿಯ ಕತ್ತು ಸೀಳಿ ಕೊಲೆಗೈದ ಪ್ರಕರಣ : ಇಬ್ಬರ ಬಂಧನ

ಮೈಸೂರು,ಜೂ.12:- ಮೈಸೂರಿನ ಅದೀಶ್ವರನಗರದಲ್ಲಿ ವ್ಯಕ್ತಿಯ ಕತ್ತು ಸೀಳಿ ನಡೆಸಿದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಎಸ್ಪಿ ಆರ್.ಚೇತನ್ ತಿಳಿಸಿದರು.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್.ಪಿ ಆರ್. ಚೇತನ್, ರಾಜಸ್ಥಾನ ಮೂಲದ ತೇಜ್ ಮಾಲ್ ರಯೀಕಾ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ. ಇಲವಾಲ ನಿವಾಸಿ ರವೀಶ್ ಕೊಲೆಯಾಗಿದ್ದ ವ್ಯಕ್ತಿ. ಜೂ.10ರಂದು ಮೈಸೂರಿ ಅದೀಶ್ವರನಗರದಲ್ಲಿ ಕೊಲೆಯಾಗಿತ್ತು. ಮೂವರು ಒಟ್ಟಿಗೆ ಬಂಡವಾಳ ಹೂಡಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು.

ರವೀಶ್ ಹಣದ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ. ಬಳಿಕ ಆರೋಪಿಗಳಿಬ್ಬರು ಪಾರ್ಟಿ ಮಾಡುವುದಾಗಿ ಕರೆಸಿ ರವೀಶ್ ನನ್ನು ಕೊಲೆ ಮಾಡಿದ್ದಾರೆ.   ಇಬ್ಬರನ್ನೂ   ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಎಂದು   ತಿಳಿಸಿದರು. (ಕೆ.ಎಸ್,ಎಸ್.ಎಚ್)

ಇದನ್ನೂ ಓದಿ

ಕತ್ತು ಸೀಳಿ ವ್ಯಕ್ತಿಯ ಕೊಲೆ

Leave a Reply

comments

Related Articles

error: