ಮೈಸೂರು

ಅಮೃತ ವಿಶ್ವವಿದ್ಯಾಪೀಠಂ ಆಯೋಜಿಸಿರುವ ವಿಜ್ಞಾನ ವೆಬಿನಾರ್ ಮಾಲಿಕೆ

ಮೈಸೂರು,ಜೂ.13:- ಮೈಸೂರಿನಅಮೃತ ವಿಶ್ವವಿದ್ಯಾಪೀಠಂನ ವಿಜ್ಞಾನ ವಿಭಾಗವು ಮುಂಬರುವ ತಿಂಗಳುಗಳಲ್ಲಿ ವಿಜ್ಞಾನ ವೆಬಿನಾರ್ ಮಾಲಿಕೆಗಳನ್ನು ಹಮ್ಮಿಕೊಂಡಿದೆ.
2021ರ ಜೂನ್ 14ರಂದು ಮೊದಲ ವೆಬಿನಾರನ್ನು ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದ್ದು, ಖ್ಯಾತ ವಿಜ್ಞಾನಿ ಹಾಗೂ ಪದ್ಮಶ್ರೀ ಪುರಸ್ಕೃತ ಪ್ರೊ.ಎಲುವತಿಂಗಳ್ ಡಿ. ಜೆಮ್ಮಿಸ್‍ ಅವರು “ವಿಜ್ಞಾನದಲ್ಲಿಆರಂಭಿಕ ಹಂತದ ಪ್ರಶ್ನೆಗಳ ಮಹತ್ವ” ಎಂಬ ವಿಷಯದಕುರಿತುಉಪನ್ಯಾಸ ನೀಡಲಿದ್ದಾರೆ.
ವಿದ್ಯಾರ್ಥಿಗಳು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ ಹಾಗೂ ಅವರ ಸಂಶೋಧನೆಗಳಿಂದ ಸ್ಪೂರ್ತಿ ಪಡೆದು ಸಾಮಾನ್ಯ ವಿಜ್ಞಾನದಲ್ಲಿ ವೃತ್ತಿಪರರಾಗಿ ಹೊರಹೊಮ್ಮುವಲ್ಲಿ ಸಹಾಯಕವಾಗಲಿ ಎಂಬ ಉದ್ದೇಶದಿಂದ ಈ ವಿಜ್ಞಾನಮಾಲಿಕೆಯನ್ನುಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗೆ 7895020467 ಅಥವಾ 8861676145 ಸಂಖ್ಯೆಯನ್ನು ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: