ಮೈಸೂರು

ಕಲಾವಿದರಿಗೆ ದಿನಸಿ ಕಿಟ್  ವಿತರಣೆ 

ಮೈಸೂರು,ಜೂ.13:- ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವಿದ್ಯಾಲಯದ ವತಿಯಿಂದ ಇಂದು ಜೆಪಿ ನಗರ ದಲ್ಲಿರುವ ಶ್ರೀ ಪುಟ್ಟರಾಜ ಗವಾಯಿಗಳ  ಕ್ರೀಡಾಂಗಣದಲ್ಲಿ 110 ಜನ ಕಲಾವಿದರಿಗೆ  ದಿನಸಿ ಕಿಟ್ ಗಳನ್ನು ವಿತರಿಸಲಾಯಿತು .
ಇದೇ ಸಂದರ್ಭದಲ್ಲಿ ಸಭಾದ ಗೌರವಾಧ್ಯಕ್ಷರಾದ ಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್   ಮಾತನಾಡಿ ಕೊರೋನಾ ಹಾವಳಿಯಿಂದ ವೃತ್ತಿಕಲಾವಿದರಿಗೆ ತುಂಬಾ ತೊಂದರೆ ಉಂಟಾಗಿದೆ. ಯಾವ ಕಾರ್ಯಕ್ರಮಗಳು ನಡೆಯುತ್ತಿಲ್ಲ , ಕಲೆಯನ್ನೇ ಜೀವನ ಆಧಾರವಾಗಿಸಿಕೊಂಡವರಿಗೆ ಬಹಳ ಕಷ್ಟವಾಗಿದೆ. ಇದನ್ನು ಮನಗಂಡು ಇಂದು ಸಹಾಯಹಸ್ತ ನೀಡ ಲಾಗಿದೆ ಎಂದರು.
ಗಣಪತಿ ಕಾರ್ಯಕ್ರಮ, ರಾಜ್ಯೋತ್ಸವ ಕಾರ್ಯಕ್ರಮ ಇತ್ಯಾದಿ ಮನೋರಂಜನಾ ಕಾರ್ಯಕ್ರಮ ಮಾಡುವ ಸಂಘ ಸಂಸ್ಥೆಗಳು ಈ ಸಂದರ್ಭದಲ್ಲಿ ಕಲಾವಿದರಿಗೆ ಸಹಾಯಕ್ಕೆ  ನಿಲ್ಲಬೇಕು   ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಈಶ್ವರ್ , ಸಭಾದ ಅಧ್ಯಕ್ಷರಾದ ಭೀಮಾಶಂಕರ ಬಿದನೂರು,ಎಲ್.ಎನ್. ದೇಸಾಯಿ, ದತ್ತಾ ಮುಂತಾದವರು ಭಾಗವಹಿಸಿದ್ದರು.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: