ಮೈಸೂರು

ತೈಲ ಬೆಲೆ ಏರಿಕೆ ಖಂಡಿಸಿ ನಗರದ ವಿವಿಧೆಡೆ ಪ್ರತಿಭಟನೆ

ಮೈಸೂರು,ಜೂ.14-ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ನಗರ ಯುವ ಕಾಂಗ್ರೆಸ್, ದೇವರಾಜ ಹಾಗೂ ಇಂದಿರಾಗಾಂಧಿ ಬ್ಲಾಕ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಯಾದಗಿರಿ ಆಕಾಶವಾಣಿ ಹಾಗೂ ಗೋಕುಲಂ ಮುಂಭಾಗವಿರುವ ಪೆಟ್ರೋಲ್ ಬಂಕ್ ನಲ್ಲಿ ಮಾಜಿ ಶಾಸಕ   ವಾಸು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ದೀಪಕ್ ಶಿವಣ್ಣ, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ  ಮೊಹಮ್ಮದ್ ಹ್ಯಾರಿಸ್, ಉಪಾಧ್ಯಕ್ಷ ಸಯ್ಯದ್ ಅಬ್ರಾರ್, ಯೂತ್ ಕಾಂಗ್ರೆಸ್ ಮುಖಂಡ ಮನೋಜ್, ಐಟಿ ಸೆಲ್ ವಿನೋದ್, ಬ್ಲಾಕ್ ಅಧ್ಯಕ್ಷರುಗಳಾದ ರಘು, ಪಡುವಾರಳ್ಳಿ ವಿಷ್ಣುಪ್ರಿಯ, ಚಂದ್ರು, ನಿತಿನ್ ಪುಟ್ಟಸ್ವಾಮಿ ಪಡುವಾರಳ್ಳಿ, ಯಶವಂತ್, ಮೊಹಮ್ಮದ್ ಬುರಾನ್, ದೇಶಿಕ್, ಗಣೇಶ್ ಇತರರು ಉಪಸ್ಥಿತರಿದ್ದರು.

ಚಾಮುಂಡೇಶ್ವರಿ ಬ್ಲಾಕ್ ಸಮಿತಿ:

ಚಾಮುಂಡೇಶ್ವರಿ ಬ್ಲಾಕ್ ಸಮಿತಿ ವತಿಯಿಂದ ಸಮಿತಿಯ ಅಧ್ಯಕ್ಷರಾದ ನಾಗನಹಳ್ಳಿ ಉಮಾಶಂಕರ್ ಅಧ್ಯಕ್ಷತೆಯಲ್ಲಿ ನಗರದ ನಿವೇದಿತಾ ನಗರದ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಕೆ.ಮರಿಗೌಡ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಜೇಸುದಾಸ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಿನಕಲ್ ಮಂಜು, ಇಲವಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಸ್.ಸಿದ್ದರಾಜು, ಮಾಜಿ ಮೇಯರ್ ಪುಷ್ಪಲತ ಚಿಕ್ಕಣ್ಣ, ಸುಶೀಲ ನಂಜಪ್ಪ, ಸಿ.ಎಸ್.ರಘು, ವಿಜಯಲಕ್ಷ್ಮಿ, ರಾಣಿಪ್ರಭಾ, ನಂಜಪ್ಪ, ಯಶವಂತ್, ಮಹದೇವ್, ಹರೀಶ್ ರಘು, ಸಂಗೊಳ್ಳಿ ರಘು, ವಿಕ್ಕಿ ವಾಸು ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: