ಮೈಸೂರು

ವಿಶ್ವ ರಕ್ತದಾನಿಗಳ ದಿನಾಚರಣೆ: ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ 9 ಮಂದಿಗೆ ಸನ್ಮಾನ

ಮೈಸೂರು,ಜೂ.14-ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ 9 ಮಂದಿಯನ್ನು ಅಭಿನಂದಿಸಿ ಸನ್ಮಾನಿಸಲಾಯಿತು,

ರಕ್ತದಾನಿಗಳಾದ ಗಿರೀಶ್ (75 ಬಾರಿ), ಮಹಾದೇವ್ (60), ಯೋಗೀಶ್ (55), ಶಿವಕುಮಾರ್ (32), ವಿನಯ್, ಶ್ರೀನಿಧಿ ವಾದಿರಾಜ್, ಗೀತಾ  ಲಲತಾ ನಾಯಕ್, ಬಿ.ಎಸ್.ಶ್ರೀನಾಥ್, ಶಿವಕುಮಾರ್ ಅವರು ತಲಾ 30 ಬಾರಿ ರಕ್ತದಾನ ಮಾಡಿದ್ದಾರೆ. ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ರಕ್ತದಾನ ಶ್ರೇಷ್ಠದಾನ. ಶಸ್ತ್ರಚಿಕಿತ್ಸೆ ಮತ್ತು ಹೆರಿಗೆಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಅನಿವಾರ್ಯ. ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ರಕ್ತನಿಧಿ ಕೇಂದ್ರಗಳಲ್ಲಿ ಶೇ.30 ಶೇಖರಣೆ ಪ್ರಮಾಣ ಬಂದಿರುವ ಸಮಸ್ಯೆಯನ್ನು ನಿವಾರಿಸಲು ಯುವ ಸಮೂಹ ಹೆಚ್ಚಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಎಸಿಬಿ ವಿಭಾಗದ ವೃತ್ತ ನಿರೀಕ್ಷಕ ಕಿರಣ್, ಮಂಡಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಅರುಣ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಮುತ್ತಣ್ಣ, ನಗರ ಪಾಲಿಕಾ ಸದಸ್ಯ ನಾಗರಾಜು, ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ, ಆರ್.ಜಿ.ಎಸ್. ಗ್ರೂಪ್ ಅಧ್ಯಕ್ಷ ದೇವೇಂದ್ರ ಪರಿಹಾರಿಯ, ಡಾ.ಮಮತಾ, ಭಾರತಿ, ದಿಲೀಪ್ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: