ಮೈಸೂರು

ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯನವರಿಗೆ ಶ್ರದ್ಧಾಂಜಲಿ ಅರ್ಪಣೆ

ಮೈಸೂರು, ಜೂ.14:-  ಪ್ರಖ್ಯಾತ ಸಾಹಿತಿಗಳಾದ ದಿ. ಡಾ.ಸಿದ್ದಲಿಂಗಯ್ಯನವರ ನಿಧನದ ಹಿನ್ನೆಲೆ ಮೈಸೂರಿನ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ ಜರುಗಿತು.

ಖ್ಯಾತ ಚಿಂತಕರುಗಳೂ, ವಿಚಾರವಾದಿಗಳು,
ಸಾಹಿತಿಗಳೂ ಆದ  ಕಾಳೇಗೌಡ ನಾಗವಾರ,
ರಂಗಕರ್ಮಿ  ಜನಾ  ರ್ಧನ್ (ಜನ್ನಿ),
ಬಿ.ಎಸ್.ಸತ್ಯನಾರಾಯಣ್, ವಡ್ಡಗೆರೆ ಚಿನ್ನಸ್ವಾಮಿ , ಡಾ.ಸ್ವಾಮಿ ಆನಂದ್, ಬಂಜಗೆರೆ ಜಯಪ್ರಕಾಶ್ ಜೂಮ್ ಮೂಲಕ ಭಾಗವಹಿಸಿದ್ದರು.
ಮಾಜಿ ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷರಾದ  ಹೆಚ್ ಎ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಜನಸ್ಪಂದನ ಟ್ರಸ್ಟ್(ರಿ) ವತಿಯಿಂದ ಮಾಜಿ ಶಾಸಕರಾದ  ಎಂ ಕೆ ಸೋಮಶೇಖರ್ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: