
ಮೈಸೂರು
ಮಹಾಲಕ್ಷ್ಮಿ ಸ್ವೀಟ್ಸ್ ಸಂಸ್ಥೆ ವತಿಯಿಂದ ದಿನಸಿ ಕಿಟ್ ವಿತರಣೆ
ಮೈಸೂರು, ಜೂ.14:- ಇಂದು ವಿದ್ಯಾರಣ್ಯಪುರಂನಲ್ಲಿ ಉದ್ಯಮಿ ಮಹಾಲಕ್ಷ್ಮಿ ಸ್ವೀಟ್ಸ್ ಮಾಲೀಕರಾದ ಶಿವಕುಮಾರ್ ರವರು ಇನ್ನೂರು ಕುಟಂಬಗಳಿಗೆ ದಿನಸಿ ಕಿಟ್ ವಿತರಿಸಿದರು.
ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ರವರು ದಿನಸಿ ಕಿಟ್ ವಿತರಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಶಿವಕುಮಾರ್ ರವರು ಎಲೆಮರೆಕಾಯಿಯಂತೆ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರಲ್ಲದೆ ನಾಗರಿಕರು ಮಾಸ್ಕ್ ಅನ್ನು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋರೋನಾ ದಿಂದ ದೂರವಿರಬೇಕು ಹಾಗೂ ಉಳ್ಳವರು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದರು .
ಈ ಸಂದರ್ಭದಲ್ಲಿ ಮುಖಂಡರಾದ ಸಿ ಸಂದೀಪ್ , ಸೋಮೇಶ್, ಧರ್ಮೇಂದ್ರ, ಶಿವಕುಮಾರ್, ಅದ್ವೈತ್, ರಾಮಚಂದ್ರ, ಮಹೇಶ್ ಮುಂತಾದವರು ಹಾಜರಿದ್ದರು.(ಜಿ.ಕೆ,ಎಸ್.ಎಚ್)