ದೇಶಪ್ರಮುಖ ಸುದ್ದಿ

ತೆಲಂಗಾಣದ ಮಾಜಿ ಸಚಿವ ಈಟೆಲಾ ರಾಜೇಂದರ್ ಬಿಜೆಪಿಗೆ ಸೇರ್ಪಡೆ

ಹೈದರಾಬಾದ್,ಜೂ.14-ತೆಲಂಗಾಣದ ಮಾಜಿ ಸಚಿವ ಈಟೆಲಾ ರಾಜೇಂದರ್ ಅವರು ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಈಟೆಲಾ ರಾಜೇಂದರ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಜೇಂದರ್ ಜೊತೆ ಮಾಜಿ ಸಂಸದ ರಮೇಶ್ ರಾಥೋಡ್, ಮಾಜಿ ಶಾಸಕ ಎನುಗು ರವೀಂದರ್ ರೆಡ್ಡಿ, ಮಾಜಿ ಟಿಆರ್‌ಎಸ್ ಮಹಿಲಾ ಅಧ್ಯಕ್ಷ ತುಲಾ ಉಮಾ, ನಳಿನಿ, ಮಾಜಿ ಟಿಎಸ್‌ಆರ್ಟಿಸಿ ನೌಕರರ ಸಂಘಗಳು ಜೆಎಸಿ ಅಧ್ಯಕ್ಷ ಅಶ್ವಥಮಾ ರೆಡ್ಡಿ, ಕಂಟೋನ್ಮೆಂಟ್(ಹೈದರಾಬಾದ್) ಉಪಾಧ್ಯಕ್ಷ ಸದಾ ಕೇಶವ್ ರೆಡ್ಡಿ, ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡರು ಮತ್ತು ಕೆಲವೇ ಇತರರು ಕೇಸರಿ ಪಕ್ಷಕ್ಕೆ ಸೇರಿದ್ದಾರೆ.

ಪಕ್ಷದ ಸೇರ್ಪಡೆ ಸಮಾರಂಭದ ವೇಳೆ ಸಂಸದ ಧರ್ಮಪುರಿ ಅರವಿಂದ್, ಸಂಸದ ಸೋಯಂ ಬಾಪುರಾವ್, ಶಾಸಕ ಎಂ.ರಘುನಂದನ್ ರಾವ್, ಜಿ ಪ್ರೀಮಂದರ್ ರೆಡ್ಡಿ ಸೇರಿದಂತೆ ತೆಲಂಗಾಣ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಕೇಸರಿ ಪಕ್ಷಕ್ಕೆ ಸೇರುವ ಎರಡು ದಿನಗಳ ಮೊದಲು ರಾಜೇಂದರ್ ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಶಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: