ಮೈಸೂರು

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ  ಪ್ರತಿಭಟನೆ

ಮೈಸೂರು,ಜೂ.15:- ಕೃಷ್ಣರಾಜ ಕ್ಷೇತ್ರ ಕಾಂಗ್ರೆಸ್ ಸಮಿತಿ  ಮತ್ತು ನಗರ ಯುವ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ  ಚಾಮರಾಜ ಜೋಡಿ ರಸ್ತೆ  ಬಳಿ ಇರುವ ಪೆಟ್ರೋಲ್ ಬಂಕ್ ನಲ್ಲಿ ವಿನೂತನವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು  ನಡೆಸಲಾಯಿತು.

ಈ ಸಂದರ್ಭದಲ್ಲಿ ಜನಸಾಮಾನ್ಯರ ಜೇಬಿನಿಂದ ನೂರು ರೂಪಾಯಿ ಹಣವನ್ನು ಕದಿಯುವ ಅಣಕು ಪ್ರದರ್ಶನ ಮಾಡಲಾಯಿತು. ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ನೂಕಿದೆ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಂಡಿಸಿಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಶ್ರೀನಾಥ ಬಾಬು, ಸುನಂದಕುಮಾರ್, ಸೇವಾದಳದ ಗಿರೀಶ, ಯು.ಎಸ್. ರಮೇಶ,ಡೈರಿ ವೆಂಕಟೇಶ್, ನಟರಾಜ್, ಚಂದ್ರಶೇಖರ.ಎಂ ,ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ದೀಪಕ್ ಶಿವಣ್ಣ,ನಗರ ಯುವ ಕಾಂಗ್ರೆಸ್ ಉಪಧ್ಯಕ್ಷ ಸೈಯದ್ ಅಬ್ರಾರ್,ದೇವರಾಜ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ದೇವರಾಜ ಅರಸು ಯುವ ಕಾಂಗ್ರೆಸ್ ಉಪಧ್ಯಕ್ಷ ನವೀನ್ ಕೆಂಪಿ,ಯುವ ಮುಖಂಡ ಯಶವಂತ್,ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನೋಜ್.ಎನ್  ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: