ಮೈಸೂರು

ಕೋವಿಡ್ ಕೇಂದ್ರದಲ್ಲಿನ ರೋಗಿಗಳಿಗೆ ಹಾಲು ಬಿಸ್ಕತ್ ವಿತರಿಸಿದ ಕೊರೊನಾ ಸೇವಾ ಪಡೆ

ಮೈಸೂರು, ಜೂ.15:- ಗ್ರಾಮೀಣ ಜನರ ಕೊರೋನ ಸೇವಾ ಪಡೆ ವರಕೋಡು ಕೋವಿಡ್ ಕೇಂದ್ರದ ರೋಗಿಗಳಿಗೆ ಹಾಲು ಬಿಸ್ಕತ್ ವಿತರಿಸಿದೆ.

100 ಕೊರೋನ ಸೋಂಕಿತರು ಇರುವ ಮೈಸೂರು ತಾಲೂಕು ವರಕೂಡು ಕೋವಿಡ್ ಕೇಂದ್ರಕ್ಕೆ ಇಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಾಗೂ ಗ್ರಾಮೀಣ ಜನರ ಕೊರೋನಾ ಸೇವಾ ಪಡೆ ಮುಖ್ಯಸ್ಥ, ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಭೇಟಿ ನೀಡಿ ಸೋಂಕಿತರ ಜೊತೆ ಸಮಾಲೋಚನೆ ನಡೆಸಿದರು.

ಈ ಕೇಂದ್ರದಲ್ಲಿರುವ ಎಲ್ಲರಿಗೂ ಉತ್ತಮ ವಾತಾವರಣ ಊಟ ವಸತಿ ವ್ಯವಸ್ಥೆ ಮಾಡಲಾಗಿದ್ದು, ರೋಗಿಗಳಿಂದ  ಉತ್ತಮ ಪ್ರತಿಕ್ರಿಯೆ ಬಂದಿದೆ. ಸೋಂಕಿತರ ಜೊತೆ ಮಾತನಾಡಿದ ಕುರುಬೂರು ಶಾಂತಕುಮಾರ್ ಕೋರೋನ ಬಂದವರು ಭಯ ಆತಂಕ ಪಡಬಾರದು. ಧೈರ್ಯವಾಗಿ ಎದುರಿಸಬೇಕು.ಹಳ್ಳಿಗಳಲ್ಲಿ ಭಯಪಟ್ಟು ಸಕಾಲಕ್ಕೆ ಪರೀಕ್ಷೆ ಮಾಡಿಕೊಳ್ಳದೆ ನಿರ್ಲಕ್ಷಿಸುತ್ತಿರುವ ಕಾರಣ ರೋಗ ಉಲ್ಬಣಿಸುತ್ತಿದೆ. ಸಮಸ್ಯೆಗಳು ಹೆಚ್ಚುವಂತಾಗಿದೆ ಇನ್ನಾದರೂ ಗ್ರಾಮೀಣ ಜನತೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಮೂರನೇ ಅಲೆ  ಕುರಿತು ಜನರು ಜಾಗೃತರಾಗಿರಬೇಕು ಎಂದು ತಿಳಿಸಿದರು.

ಗ್ರಾಮೀಣ ಜನರ ಕೊರೋನಾ ಸೇವಾ ಪಡೆಯ ವೈದ್ಯರು ಹಳ್ಳಿಗಳಲ್ಲಿ ಜನರ ಜೊತೆ ಮುಂದಿನ ಅಲೆ ಬಗ್ಗೆ ಸಮಾಲೋಚನೆ ಸಭೆ ನಡೆಸಲು ತೀರ್ಮಾನಿಸಲಾಗಿದ್ದು ಸದ್ಯದಲ್ಲಿಯೇ ಹಳ್ಳಿಗಳಲ್ಲಿ ಈ ರೀತಿ ಸಭೆಗಳನ್ನು ನಡೆಸಿ ಉಚಿತ ಸೇವೆಯನ್ನು ನೀಡುವ ಮೂಲಕ ಜನರನ್ನ ಜಾಗೃತಿ ಗೊಳಿಸಲಾಗುವುದು. ಈ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯಸ್ಥರುಗಳು ಸಂಘ-ಸಂಸ್ಥೆಗಳನ್ನು ಸಂಪರ್ಕ ಮಾಡಿದರೆ ಅಂತಹ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಕೋವಿಡ್ ಕೇಂದ್ರದಲ್ಲಿ ಇದ್ದ 61 ಮಹಿಳೆಯರು 39 ಪುರುಷರಿಗೆ ಹಾಲು ಬಿಸ್ಕೆಟ್ ವಿತರಿಸ ಲಾಯಿತು, ಒಂದೇ ಕುಟುಂಬದ ಐದು ಜನ ಸೋಂಕಿತರಾಗಿ  ಚಿಕಿತ್ಸೆ ಪಡೆಯುತ್ತಿದ್ದು, ಮೂರು ಜನ ಮಹಿಳೆಯರು ಒಬ್ಬ ಪುರುಷ ಒಂದು 9 ವರ್ಷದ ಮಗು ಸೇರಿದಂತೆ 17 ಜನ ಇಂದು ಬಿಡುಗಡೆಯಾದರು.

ಇಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಡಲ್ ಆಫೀಸರ್ ಸಾಯಿ ಶಂಕರ್ ,ಉಪತಹಶೀಲ್ದಾರ್

ಬಿ ವಿ ನಂದಕಿಶೋರ್ ಕಂದಾಯ ಅಧಿಕಾರಿ ಶಂಕರ್ ರವರು ಉತ್ತಮ ಮೇಲ್ವಿಚಾರಣೆ ನಡೆಸುತ್ತಿ ದ್ದು, ಅದಕ್ಕಾಗಿ ಅವರನ್ನು ಪ್ರಶಂಸಿಸಲಾಯಿತು.

ತಾಲೂಕು ಕಬ್ಬುಬೆಳೆಗಾರರ ಸಂಘದ ಮುಖಂಡರುಗಳಾದ ವರಕೋಡು ಗ್ರಾಮದ ಜಯರಾಮೇಗೌಡ ಪುಟ್ಟಸ್ವಾಮಿ ಚಾರ್ ಪುಟ್ಟೇಗೌಡನ ಹುಂಡಿ ರಾಜು ವರಕೋಡು ಬೋರೇಗೌಡ. ಕೃಷ್ಣೆಗೌಡ . ಸಾತಗಳ್ಳಿ ಬಸವರಾಜು ಗಣಗರ ಹುಂಡಿ ವೆಂಕಟೇಶ್. ರಾಮೇಗೌಡ ಬರಡನಪುರ ನಾಗರಾಜ್. ಹತ್ತಳ್ಳಿ ದೇವರಾಜ  ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: