ಸುದ್ದಿ ಸಂಕ್ಷಿಪ್ತ

ಗುಡುಗು ಸಹಿತ ಭಾರೀ ಮಳೆ

ಮೈಸೂರಿನಾದ್ಯಂತ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದೆ. ಕಳೆದೆರಡು ದಿನಗಳಿಂದ ಬಾರದಿದ್ದ ಮಳೆ ಮಂಗಳವಾರ ಮತ್ತೆ ಆರಂಭವಾಗಿದೆ.

ಸಂಜೆ 6ಗಂಟೆಯಿಂದ ಆರಂಭಗೊಂಡ ಮಳೆ ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ತಂಪೆರೆದಿದೆ. ಮೈಸೂರು, ಚಾಮರಾಜನಗರ, ಮಂಡ್ಯಗಳಲ್ಲಿ ಮಳೆ ಸುರಿಯಲಿದ್ದು, ಭಾರೀ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜನತೆ ಎಚ್ಚರಿಕೆಯಲ್ಲಿರಬೇಕೆಂದು ತಿಳಿಸಲಾಗಿದೆ. (ಕೆ.ಎಸ್)

Leave a Reply

comments

Related Articles

error: