ಮೈಸೂರು

ಅವಧಿಗೂ ಮುನ್ನವೇ ಚುನಾವಣೆ ಎದುರಾಗುವ ಸಾಧ್ಯತೆಯಿದೆ : ಯಡಿಯೂರಪ್ಪ ಹೇಳಿಕೆ

ರಾಜ್ಯದಲ್ಲಿ ಅವಧಿಗೆ ಮುನ್ನವೇ ವಿಧಾನಸಭೆ ಚುನಾವಣೆ ಎದುರಾಗುವ ಸಾಧ್ಯತೆಯಿದೆ ಇದಕ್ಕೆ ಬಿಜೆಪಿ ಕಾರ್ಯಕರ್ತರು ಸಜ್ಜಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ನಾವು ವಿಫಲರಾದೆವು. ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದನ್ನು ನಾವು ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದೇವೆ. ಉಪ ಚುನಾವಣೆಯಲ್ಲಿ ಇದೆ ಸೋಲಿಗೆ ಕಾರಣವಾಯಿತು ಎಂದರು. ಮಾಜಿ ಸಂಸದ ಹೆಚ್.ವಿಶ್ವನಾಥ್ ಕಾಂಗ್ರೆಸ್‌ ಪಕ್ಷ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಅವರ ಪಕ್ಷದ ವಿಚಾರವನ್ನು ಅವರ ನಾಯಕರ ಬಳಿಯೇ ಕೇಳಿ. ವಿಶ್ವನಾಥ್ ಅವರು ನನ್ನ ಜೊತೆ ಮಾತನಾಡಿಲ್ಲ ಎಂದರು. ಮುಖ್ಯಮಂತ್ರಿ  ಪುತ್ರ ಡಾ.ಯತೀಂದ್ರಗೆ ಸಾಂವಿಧಾನಿಕ ಹುದ್ದೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ದ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ತಮ್ಮ ಮಗನನ್ನ ಬೆಳೆಸಲು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯಾವ ಮುಖ್ಯಮಂತ್ರಿಗಳು ಮಾಡದ ಅಧಿಕಾರ ದುರುಪಯೋಗ ಮಾಡಿಕೊಂಡಿರೋದು ಸಿದ್ದರಾಮಯ್ಯ ಮಾತ್ರ.ಯತೀಂದ್ರ ಗೆ ಸಾಂವಿಧಾನಿಕ ಹುದ್ದೆ ನೀಡುವುದು ಬರಿ ನೆಪ ಮಾತ್ರಕ್ಕೆ.ಈಗಾಗಲೇ ಅಧಿಕಾರ ದುರುಪಯೋಗ ಮಾಡಿಕೊಂಡು ಮಾಡಬಾರದ್ದನ್ನು ಮಾಡಿದ್ದಾರೆ. ಮಾಧ್ಯಮಗಳಲ್ಲಿ ಯತೀಂದ್ರ ವಿರುದ್ದ ಬರುತ್ತಿರುವ ಸುದ್ದಿ ಮುಚ್ಚಿಹಾಕಲು ಇದು ಕಾರ್ಯತಂತ್ರ ಅಷ್ಟೇ. ಎಲ್ಲ ಕಡೆ ಛೀಮಾರಿ ಹಾಕಿಸಿಕೊಂಡು ಈಗ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಮಗನಿಗಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳೊದು ಎಷ್ಟು ಸರಿ ಅಂತ ಸಿಎಂ ಮುಖ್ಯಮಂತ್ರಿಗಳು ಚಿಂತನೆ ಮಾಡಲಿ ಎಂದು ತಿಳಿಸಿದರು.

Leave a Reply

comments

Related Articles

error: