ದೇಶಪ್ರಮುಖ ಸುದ್ದಿ

ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್ ಬಳಿಕ ಗ್ರೀನ್ ಫಂಗಸ್ ಪತ್ತೆ! ದೇಶದಲ್ಲೇ ಮೊದಲ ಪ್ರಕರಣ

ಇಂದೋರ್‌,ಜೂ.16-ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್ ಬಳಿಕ ಇದೀಗ ಗ್ರೀನ್ ಫಂಗಸ್ ಕಾಣಿಸಿಕೊಂಡಿದೆ. ಕಪ್ಪು, ಬಿಳಿ, ಹಳದಿ ಫಂಗಸ್​ನ ಅಟ್ಟಹಾಸ ಹೆಚ್ಚುತ್ತಿರುವ ನಡುವೆಯೇ ಗ್ರೀನ್​ ಫಂಗಸ್​ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಕೋವಿಡ್ ನಿಂದ ಗುಣಮುಖರಾಗಿದ್ದ ಮಧ್ಯಪ್ರದೇಶದ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದ್ದು, ಇದು ದೇಶದಲ್ಲೇ ಮೊದಲ ಪ್ರಕರಣ.

ರೋಗಿಯನ್ನು ಏರ್‌ ಆಂಬುಲೆನ್ಸ್‌ ಮೂಲಕ ಮುಂಬೈಗೆ ಕರೆದೊಯ್ದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಲ್ಲಿನ ಶ್ರೀ ಅರವಿಂದೊ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ಎದೆರೋಗಗಳ ವಿಭಾಗದ ಮುಖ್ಯಸ್ಥ ಡಾ.ರವಿ ದೋಸಿ ತಿಳಿಸಿದ್ದಾರೆ.

ಕೋವಿಡ್‌ನಿಂದ ಗುಣಮುಖರಾದರೂ ಈ ವ್ಯಕ್ತಿಯಲ್ಲಿ ವಿಪರೀತ ಜ್ವರ, ಮೂಗಿನಿಂದ ರಕ್ತಸ್ರಾವ ಕಾಣಿಸಿಕೊಂಡಿತು. ಕಪ್ಪು ಶಿಲೀಂಧ್ರ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಪರೀಕ್ಷೆ ಮಾಡಲಾಯಿತು. ಅವರಿಗೆ ‘ಹಸಿರು ಶಿಲೀಂಧ್ರ’ ಸೋಂಕು (ಆಯಸ್ಪರ್‌ಗಿಲೋಸಿಸ್‌) ತಗುಲಿರುವುದು ದೃಢಪಟ್ಟಿತು ಎಂದು ಅವರು ಹೇಳಿದ್ದಾರೆ.

ಕರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿ ಸುಮಾರು ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲೇ ಇದ್ದರು. ಗುಣಮುಖರಾದ ಬಳಿಕ ಮನೆಗೆ ಕಳಿಸಲಾಗಿತ್ತು. ಇದಾದ 10 ದಿನಕ್ಕೆ ಮೂಗು ತುರಿಕೆ, ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಗ್ರೀನ್ ಫಂಗಸ್​ ಪತ್ತೆಯಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: