ಮೈಸೂರು

ಸಂಕಷ್ಟದಲ್ಲಿದ್ದ ಸಿನಿ ಕಲಾವಿದರ ನೆರವಿಗೆ ಧಾವಿಸಿದ ಹರ್ಷವರ್ಧನ್ ಗೌಡ : ಆಹಾರ ಕಿಟ್ ವಿತರಣೆ

ಮೈಸೂರು,ಜೂ.17:- ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಲಾಕ್ ಡೌನ್  ಇನ್ನೂ ಜಾರಿಯಲ್ಲಿದೆ, ಇದರಿಂದ ನಿಜಕ್ಕೂ ಸಮಸ್ಯೆ ಎದುರಿಸುತ್ತಿರುವುದು ದಿನಗೂಲಿ ನೌಕರರು , ನಿರಾಶ್ರಿತರು, ನಿರ್ಗತಿಕರು , ಬಡಜನರು ಅದರಂತೆ ಸಿನಿಮಾ ಕಾರ್ಮಿಕರು ಮತ್ತು ಬಡ ಕಲಾವಿದರು .

ಸಿನಿಮಾವನ್ನೇ ನಂಬಿ ಬದುಕುತ್ತಿರುವ ಅದೆಷ್ಟೋ ಕಲಾವಿದರು ಇಂದು ಅಕ್ಷರಶಃ ಪರದಾಡುವಂತಾಗಿದೆ. ಲಾಕ್ ಡೌನ್ ಮುಗಿಯುವವರೆಗೂ ಅವರಿಗೆ ಈ ತೊಂದರೆ ತಪ್ಪಿದ್ದಲ್ಲ.  ಮೈಸೂರು ಸೇರಿದಂತೆ ಬೆಂಗಳೂರಿನ ಸಿನಿಮಾ  ಕಲಾವಿದರು ಸಂಕಷ್ಟದಲ್ಲಿರುವುದನ್ನು ಮನಗಂಡು ಸಮಾಜಸೇವಕ , ಸಿನಿಮಾ ನಿರ್ಮಾಪಕ ಹರ್ಷವರ್ಧನ್ ಗೌಡ ಅವರು ಸುಮಾರು ನೂರು ಮಂದಿಗೆ ಆಹಾರ ಪದಾರ್ಥಗಳನ್ನು ವಿತರಿಸಿದ್ದಾರೆ.   ಮೈಸೂರು ಅಲ್ಲದೆ ಬೆಂಗಳೂರಿನ ನಾನಾ ಭಾಗಗಳಲ್ಲಿ ಅರವಿಂದ್ ಅವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಆಹಾರ ಕಿಟ್ ಪಡೆದ ಎಲ್ಲಾ ಸಿನಿಮಾ ಕಲಾವಿದರು ಹರ್ಷವರ್ಧನ್ ಗೌಡರ ಈ ಕಾರ್ಯ ಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಅವರ ಮುಂದಿನ  ಸಿನಿ ಪಯಣಕ್ಕೆ ಶುಭಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: