ಮೈಸೂರು

ಹಾಳಾದ ಯುಜಿಡಿ ;ಸಮಸ್ಯೆ ತಕ್ಷಣ ಬಗೆಹರಿಸುವಂತೆ ಶಾಸಕ ನಾಗೇಂದ್ರ ಸೂಚನೆ; ಪರಿಶೀಲನೆ

ಮೈಸೂರು,ಜೂ.17:- ವಾರ್ಡ್ ಸಂಖ್ಯೆ-22 ರ ವಿನಾಯಕನಗರ-ಪಡುವಾರಹಳ್ಳಿ 5ನೇ ಕ್ರಾಸ್ ರಸ್ತೆಯಲ್ಲಿ ಯು.ಜಿ.ಡಿ ತೀವ್ರವಾಗಿ ಹಾಳಾಗಿದ್ದು, ಆಗಿಂದಾಗ್ಗೆ ಮನೆಗಳಿಂದ ಹೊರಹೋಗುವ ತ್ಯಾಜ್ಯದ ಒಳಚರಂಡಿ ಕಟ್ಟಿಕೊಂಡು ಸಾರ್ವಜನಿಕರು ಪ್ರತಿನಿತ್ಯ ತೀವ್ರ ಸಮಸ್ಯೆಗಳನ್ನು ಅನುಭವಿಸುತ್ತಿದ್ದರಿಂದ ಸ್ಥಳೀಯ ಸಾರ್ವಜನಿಕರು   ಶಾಸಕರಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ   ಎಲ್.ನಾಗೇಂದ್ರ ಅವರು, ಮೈಸೂರು ಮಹಾನಗರಪಾಲಿಕೆ   ಚಿಕ್ಕವೆಂಕಟು  ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿಗೆ ಅಗತ್ಯವಾದ ಅನುದಾನ ಮೈಸೂರು ಮಹಾನಗರಪಾಲಿಕೆ ವತಿಯಿಂದ ಮಂಜೂರಾದ ರೂ.3.90ಲಕ್ಷದ ಯು.ಜಿ.ಡಿ ಮರು ನಿರ್ಮಾಣ ಕಾಮಗಾರಿಗೆ ಕೂಡಲೇ ಚಾಲನೆ ನೀಡುವಂತೆ ಇಂಜಿನಿಯರುಗಳಿಗೆ ನಿರ್ದೇಶನ ನೀಡಿದರು.

ಈ ಸಮಯದಲ್ಲಿ ವಾರ್ಡ್ ಅಧ್ಯಕ್ಷರಾದ ಎಲ್.ಮಂಜು, ಸಿಂಡಿಕೇಟ್ ಸದಸ್ಯರಾದ ವಕೀಲ ಶಿವಕುಮಾರ್, ವೇಣು, ಗೋಪಾಲ, ರಾಮಣ್ಣ, ಆಟೋಪ್ರಕಾಶ್, ಚಲುವರಾಜು, ಅಭಿ, ಭೈರಪ್ಪ, ಬಸವರಾಜು, ಚಂದ್ರು, ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕ ಶಿವು ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: