ದೇಶಪ್ರಮುಖ ಸುದ್ದಿ

ಗಂಗೆಯಲ್ಲಿ ತೇಲಿಬಂದ ಶಿಶುವಿನ ಜವಾಬ್ದಾರಿ ಹೊತ್ತ ಯೋಗಿ ಸರ್ಕಾರ

ಲಖನೌ,ಜೂ.17-ಉತ್ತರ ಪ್ರದೇಶದ ಘಾಜಿಪುರದ ಗಂಗಾ ನದಿಯಲ್ಲಿ ಎರಡು ದಿನಗಳ ಹಿಂದೆ ಬುಟ್ಟಿಯೊಂದರಲ್ಲಿ ತೇಲಿಬಂದ ಹೆಣ್ಣುಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಮಗುವನ್ನು ಕಾಪಾಡಿದ ಅಂಬಿಗನಿಗೂ ಗೌರವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅವರಿಗೆ ಮನೆ ಸೌಕರ್ಯವನ್ನ ಒದಗಿಸಲಿದೆ. ಜತೆಗೆ ಅವರಿಗೆ ಯೋಗ್ಯವಾದ ಯೋಜನೆ ಮೂಲಕವೂ ಅನುದಾನವನ್ನ ನೀಡುವ ಎಲ್ಲಾ ವ್ಯವಸ್ಥೆ ಮಾಡಲಾಗುತ್ತೆ ಎಂದಿದ್ದಾರೆ.

ಮರದ ಪೆಟ್ಟಿಗೆಯಲ್ಲಿ ಈ ಮಗು ತೇಲಿಬಂದಿತ್ತು. ದಾದ್ರಿ ಘಾಟ್​ನಲ್ಲಿ ಮಗುವಿನ ಅಳು ಶಬ್ದ ಕೇಳಿದ ಅಂಬಿಗ ಎಲ್ಲೆಡೆ ನೋಡಿದಾಗ ಮರದ ಪೆಟ್ಟಿಗೆಯೊಂದು ಕಂಡು ಬಂದಿತ್ತು. ಈ ಪೆಟ್ಟಿಗೆಯಲ್ಲಿ ದೇವಿಯ ಫೋಟೊ ಹಾಗೂ ಮಗುವಿನ ಜಾತಕವನ್ನೂ ಇಡಲಾಗಿತ್ತು ಎನ್ನಲಾಗಿದೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಪೊಲೀಸರು ಮಗುವನ್ನ ಆಶಾ ಜ್ಯೋತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಗುವನ್ನ ಆಸ್ಪತ್ರೆಗೆ ಸೇರಿಸಿ ಆರೋಗ್ಯ ತಪಾಸಣೆ ಮಾಡಲಾಗಿದೆ . ಈ ಮಗುವಿಗೆ ಗಂಗಾ ಎಂದು ನಾಮಕರಣ ಮಾಡಲಾಗಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: