ಕರ್ನಾಟಕಪ್ರಮುಖ ಸುದ್ದಿ

ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರಿಗೆ ‘ಸಖಿ’ ಒನ್ ಸ್ಟಾಪ್ ಸೆಂಟರ್‍ನಲ್ಲಿ ನೆರವು

ರಾಜ್ಯ(ಮಡಿಕೇರಿ) ಜೂ.18:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ‘ಸಖಿ’ ಒನ್ ಸ್ಟಾಪ್ ಸೆಂಟರ್, ಘಟಕವು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಪೋಲೀಸ್ ನೆರವು, ಕಾನೂನು ಸಲಹೆ, ಸಮಾಲೋಚನೆ ಸೌಲಭ್ಯ ಒದಗಿಸಲಾಗುತ್ತದೆ. ಈ ಘಟಕವು ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯ(ಮಹಿಳಾ ಮತ್ತು ಮಕ್ಕಳ ವಿಭಾಗ) ಆವರಣದಲ್ಲಿದೆ.
ಖಾಸಗಿ ಹಾಗೂ ಸಾಮಾಜಿಕ ಸ್ತರಗಳಲ್ಲಿ ಹಿಂಸಾಚಾರ ಪೀಡಿತ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ರೀತಿಯ ಸಹಾಯ ಮತ್ತು ಬೆಂಬಲವನ್ನು ಒದಗಿಸುವುದು. ಯಾವುದೇ ರೀತಿಯ ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಹಿಂಸಾಚಾರಗಳು/ ಸಮಸ್ಯೆಗಳಿಗೆ ಒಂದೇ ಸೂರಿನಡಿಯಲ್ಲಿ ವೈದ್ಯಕೀಯ, ಮಾನಸಿಕ, ಕಾನೂನು ಸಮಾಲೋಚನೆ ಮೊದಲಾದ ಸೇವೆಗಳನ್ನು ನೀಡಲಾಗುತ್ತದೆ.
ವೈದ್ಯಕೀಯ ನೆರವು ಹಾಗೂ ಸಮಾಲೋಚನೆ: ಹಿಂಸಾಚಾರಕ್ಕೆ ಒಳಗಾದ ಮಹಿಳೆಗೆ ವೈದ್ಯಕೀಯ ತುರ್ತು ಸೇವೆಗಳ ಅಗತ್ಯವಿದ್ದರೆ ತಕ್ಷಣ ವೈದ್ಯಕೀಯ ಹಾಗೂ ಸಮಾಲೋಚನೆ ನೀಡಲಾಗುವುದು. ಪೊಲೀಸ್ ನೆರವು: ಪ್ರಥಮ ವರ್ತಮಾನ ವರದಿ ಬಗ್ಗೆ ಮಾಹಿತಿ ಹಾಗೂ ಸಹಾಯ ಒದಗಿಸಲಾಗುವುದು. ಆಪ್ತ ಸಮಾಲೋಚನೆ: ನುರಿತ ಸಮಾಲೋಚನಾಗರರಿಂದ ಸಲಹೆ ಹಾಗೂ ಸಮಾಲೋಚನೆ ನೀಡಲಾಗುವುದು. ಕಾನೂನು ಸಲಹೆ ಹಾಗೂ ಸಮಾಲೋಚನೆ: ಮಹಿಳೆಗೆ ಕಾನೂನಿನ ಅರಿವು ಹಾಗೂ ಸಮಾಲೋಚನಾ ಸೇವೆ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಚಿತ ಮಹಿಳಾ ಸಹಾಯವಾಣಿ ಸಂಖ್ಯೆ: 181, ದೂರವಾಣಿ ಸಂಖ್ಯೆ: 08272-225444, 9686280372 ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ.ವಿ.ಸುರೇಶ್ ಅವರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: