ಮೈಸೂರು

 ಕೊರೂನಾ ಸಮಯದಲ್ಲಿ ಪ್ರತಿಭಟನೆ ಸಲ್ಲದು : ಲೋಹಿತ್

ಮೈಸೂರು,ಜೂ.17:-  ಕೊರೋನಾ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಅಂತಹ ಕೆಲಸ ಮಾಡಿ ಮತ್ತೆ ಕೂರೂನಾ ಹರಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ಲೋಹಿತ್  ಆರೋಪಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಡೀಸೆಲ್ ಪೆಟ್ರೋಲ್ ಮತ್ತು ಗ್ಯಾಸ್ ದರಗಳ ಏರಿಕೆಯ ಹೇಗೆ ಮತ್ತು ಏಕೆ ಆಯಿತು ಎಂದು ಚಿಂತಿಸುವ ಕೆಲಸವಾಗಬೇಕು .ದೇಶದ ಪ್ರಗತಿಗೆ ಪೂರಕವಾಗಿರುವ ಕೆಲಸಗಳನ್ನು ಸರ್ಕಾರಗಳು ಮಾಡುತ್ತಿವೆ ಎನ್ನುವ ಅರಿವು ಬರಬೇಕು .ಹಾಗಾದಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದಿದ್ದಾರೆ .

ಬಡಜನರು ಕಷ್ಟಕ್ಕೆ ಸಹಾಯ ಮಾಡಲು ಬರುವವರು ಇಂದು ಬೆಲೆ ಏರಿಕೆ ನೆಪದಲ್ಲಿ ಮನೆಯಿಂದ ಬಂದಿದ್ದಾರೆ .ಇಂತಹ ಮುಖಂಡರನ್ನು ಜನ ನಂಬುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೊರೋನಾ ಸಂದರ್ಭದಲ್ಲಿ ನಾಡಿನ ಜನತೆ ಸಂಕಷ್ಟದಲ್ಲಿ ಸಿಲುಕಿರುವಾಗ ಅವರಿಗೆ  ಸಹಾಯ  ಆಗಬೇಕು ಹೊರತು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಆಗಬಾರದು ಅದು ಸ್ವಾರ್ಥದ ಕೆಲಸವಾಗುತ್ತದೆ.

ಪೆಟ್ರೋಲ್ ಡೀಸೆಲ್ ದರವನ್ನು ಕಡಿಮೆ ಮಾಡಿ ಎಂದು ಹೋರಾಟ ಮಾಡಿಕೊಂಡು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುದನ್ನು ಬಿಟ್ಟು
ಬೀದಿಗಿಳಿದು ನೆರವಾಗಿ ಎಂದು ಸಲಹೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: