ಮೈಸೂರು

ರೈಲು ಸೇವೆ ಪುನಃ ಆರಂಭಿಸಲು ನಿರ್ಧರಿಸಿದ ನೈಋತ್ಯ ರೈಲ್ವೆ ಮೈಸೂರು ವಿಭಾಗ

ಮೈಸೂರು,ಜೂ.17:- ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಲಾಕ್‌ ಡೌನ್ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ನೈಋತ್ಯ ರೈಲ್ವೆ ಮೈಸೂರು ವಿಭಾಗವು ಹೆಚ್ಚುವರಿ ಕಾಯ್ದಿರಿಸದ MEMU ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಮತ್ತು ವಿಭಾಗದಲ್ಲಿ ಹಲವಾರು ರೈಲು ಸೇವೆಗಳನ್ನು ಪುನಃ ಆರಂಭಿಸಿದೆ.
ಈ ರೈಲುಗಳು ಕೋವಿಡ್‌ ನ ಪೂರ್ವ ವೇಳಾಪಟ್ಟಿ ಮತ್ತು ನಿಲುಗಡೆಗಳೊಂದಿಗೆ ಕೆಳಗೆ ವಿವರಿಸಿರುವಂತೆ ಚಲಿಸುತ್ತವೆ. ಕೋವಿಡ್-19 ಗೆ ಸಂಬಂಧಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ನಿಯಮಗಳನ್ನು ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ. ಕೋವಿಡ್-19 ಗೆ ಸಂಬಂಧಿಸಿದ ಇತರ ಮುನ್ನೆಚ್ಚರಿಕೆಗಳನ್ನು ಸಹ ತಪ್ಪದೆ ಪಾಲಿಸುವಂತೆ ತಿಳಿಸಿದೆ.

 

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: