ಮೈಸೂರು

ಅಂಗಡಿ ಬಾಗಿಲು ಮೀಟಿ ಕಳ್ಳತನ

ಮೈಸೂರು,ಜೂ.18:- ಹುಣಸೂರು ತಾಲೂಕಿನ ಬಿಳಿಕೆರೆ ಪಟ್ಟಣದಲ್ಲಿ ಮೂರು ಅಂಗಡಿಗಳ ಬಾಗಿಲನ್ನು ಮೀಟಿರುವ ಕಳ್ಳರು ಒಂದು ಅಂಗಡಿಯಲ್ಲಿ ಮಾತ್ರವೇ ಹದಿಮೂರು ಸಾವಿರ ರೂ.ಮೌಲ್ಯದ ವಸ್ತುಗಳನ್ನು ಕದ್ದೊಯ್ದ ಘಟನೆ ನಡೆದಿದೆ.

ಇನ್ನುಳಿದಂತೆ ಕಳ್ಳರು ಬಾಗಿಲು ಮೀಟಿದ ಅಂಗಡಿಗಳು ಖಾಲಿಯಾಗಿದ್ದ ಕಾರಣ ಕಳ್ಳರಿಗೆ ಏನೂ ಸಿಕ್ಕಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: