ಕರ್ನಾಟಕಪ್ರಮುಖ ಸುದ್ದಿ

ಸಿಡಿ ಪ್ರಕರಣ: ಯುವತಿಯಿಂದ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ; ಪ್ರತಿವಾದಿಯಾಗಿಸುವಂತೆ ಮನವಿ

ಬೆಂಗಳೂರು,ಜೂ.18-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ತನ್ನನ್ನೂ ಪ್ರತಿವಾದಿಯಾಗಿಸುವಂತೆ ಮನವಿ ಮಾಡಿದ್ದಾಳೆ.

ಯುವತಿ ಪರ ಸುಪ್ರೀಂ ಕೋರ್ಟ್ ವಕೀಲೆ​ ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ವಾದಿಸಿದ್ದಾರೆ. ಎಸ್​ಐಟಿ ತನಿಖೆ ಪ್ರಶ್ನಿಸಿ ಈಗಾಗಲೇ ಯುವತಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ.

ಇನ್ನು ಯುವತಿ ಕೊಟ್ಟಿರುವ ದೂರನ್ನು ಎಸ್‌ಐಟಿ ಮುಕ್ತಾಯಗೊಳಿಸುವ ಸಾಧ್ಯತೆ ಇದೆ. ಯುವತಿಯ ಅರ್ಜಿಯನ್ನು ಪಿಐಎಲ್​ನೊಂದಿಗೆ ಲಿಸ್ಟ್ ಮಾಡಲು ಮನವಿ ಮಾಡಲಾಗಿದ್ದು, ಪೊಲೀಸ್​ ಆಯುಕ್ತರ ಸೂಚನೆ ಮೇರೆಗೆ ತನಿಖಾ ವರದಿಗೆ ಜಂಟಿ ಪೊಲೀಸ್ ಆಯುಕ್ತರು ಸಹಿ ಮಾಡಿದ್ದಾರೆ.

ನಿನ್ನೆ ಹೈಕೋರ್ಟ್​ಗೆ ಎಸ್​ಐಟಿ ವರದಿ ನೀಡಿದ್ದು, ಪಿಐಎಲ್​ಗೆ ಮಾಜಿ ಸಚಿವರ ಪರ ವಕೀಲ ಸಿ.ವಿ.ನಾಗೇಶ್ ಲಿಖಿತ ರೂಪದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಇಡಲು ಹೈಕೋರ್ಟ್ ಸೂಚನೆ ನೀಡಿದ್ದು, ಜೂನ್ 23ಕ್ಕೆ ವಿಚಾರಣೆ ಮೂಂದೂಡಿದೆ. (ಎಂ.ಎನ್)

 

Leave a Reply

comments

Related Articles

error: