ಮೈಸೂರು

ಕೋವಿಡ್-19 ಜಾಗೃತಿ ಹಾಗೂ ಮೆಡಿಕಲ್ ಕಿತ್ ವಿತರಣಾ ಕಾರ್ಯಕ್ರಮ

ಮೈಸೂರು,ಜೂ.18:- ಮೈಸೂರು ವಿಶ್ವವಿದ್ಯಾಲಯದ ಉನ್ನತ ಭಾರತ ಅಭಿಯಾನ ಯೋಜನೆ ಹಾಗೂ ಸ್ಮಾರ್ಟ್ ವಿಲೇಜ್ ಯೋಜನೆಯಡಿ ದತ್ತು ತೆಗೆದುಕೊಂಡ ಗ್ರಾಮಗಳಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಕೋವಿಡ್-19 ಜಾಗೃತಿ ಹಾಗೂ ಮೆಡಿಕಲ್ ಕಿತ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಸ್ತುತ ದಿನದಲ್ಲಿ ಕೋವಿಡ್ 19 ಎರಡನೇ ಅಲೆಯು ದೇಶವ್ಯಾಪಿ ಹರಡಿದ್ದು ಲಾಕ್ ಡೌನ್ ಸಂದರ್ಭದಲ್ಲಿ ಆ ಗ್ರಾಮಪಂಚಾಯತಿಗಳಲ್ಲಿರುವ ಆಶ್ರಮ ಶಾಲೆಯ ಶಿಕ್ಷಕರಿಗೂ ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೋಡಿನ ಸ್ವಯಂ ಸೇವಕರಿಗೆ ಆಹಾರ ಕಿಟ್ ಗಳನ್ನು ಹಾಗೂ ಮೆಡಿಕಲ್ ಕಿಟ್ ಗಳನ್ನು ನೀಡಲಾಗುತ್ತಿದೆ. ಇಲ್ಲಿರುವ ಬುಡಕಟ್ಟು ಜನಾಂಗವು ಲಸಿಕೆ ಹಾಕಿಕೊಂಡಂತವರಿಗೂ ಸಹ ಮೆಡಿಕಲ್ ಕಿಟ್ ನ್ನು ಈ ಸಂದರ್ಭದಲ್ಲಿ ನೀಡುವುದರ ಮೂಲಕ ಉಳಿದವರು ಸಹ ಲಸಿಕೆಯನ್ನು ಹಾಕಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ 200ಜನರಿಗೆ ಮೆಡಿಕಲ್ ಕಿಟ್ ಹಾಗೂ 100 ಆಹಾರ ಕಿಟ್ ಗಳನ್ನು ಇದರೊಂದಿಗೆ  ಈ ಆರು ಗ್ರಾಮಗಳಲ್ಲಿ ಲಸಿಕೆ ಹಾಕಿಕೊಂಡವರಿಗೆ ಟವೆಲ್, ಸೋಪು ಮತ್ತು ಮಾಸ್ಕ್ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಆಹಾರ ಮತ್ತು ಮೆಡಿಕಲ್ ಕಿಟ್ ನ್ನು ಸ್ವಯಂ ಸೇವಕರಿಗೆ ವಿತರಿಸಿದರು. ತಾಲೂಕು ಮಟ್ಟದ ಬುಡಕಟ್ಟು ಕಲ್ಯಾಣಾಧಿಕಾರಿಗಳಾದಂತಹ ಮಂಜುಳಾ ಅವರು ಉನ್ನತ ಭಾರತ ಯೋಜನೆ ಹಾಗೂ ಸ್ಮಾರ್ಟ್ ವಿಲೇಜ್ ಯೋಜನೆಯ ಸಂಯೋಜನಾಧಿಕಾರಿ ಡಾ.ಹೆಚ್.ಪಿ.ಜ್ಯೋತಿ, ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿಯವರಾದಂತಹ ಮುತ್ತಯ್ಯ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: